ಜೈಪುರ: ರಾಜಸ್ತಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಇಂದಿಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫೨ ನೇ ಪಂದ್ಯ ನಡೆಯಲಿದೆ.
ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ರಾಜಸ್ತಾನ್ ರಾಯಲ್ಸ್ ೧೦ ಪಂದ್ಯಗಳಿAದ ೧೨ ಅಂಕಗಳಿಸಿ ೪ ನೇ ಸ್ಥಾನದಲ್ಲಿದೆ. ಗುಜರಾತ್ ಟೈಟನ್ಸ್ ತಂಡವು ಕೂಡ ೧೦ ಪಂದ್ಯಗಳಿAದ ೧೨ ಅಂಕಗಳನ್ನೇ ಗಳಿಸಿದೆಯಾದರೂ ರನ್ ಸರಾಸರಿಯಲ್ಲಿ ೫ ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.

