ಬೆಂಗಳೂರು : ಪರಿಷತ್ ಉಪಸಭಾಪತಿಯಾಗಿ ಎಂಎಲ್ಸಿ ಉಮಾಶ್ರೀ ಅವರನ್ನು ಆಯ್ಕೆ ಮಾಡಿದ್ದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಉಮಾಶ್ರೀ ಅವರು ನನಗೆ ಪರಿಷತ್ ಉಪಾಸಭಾಪತಿ ಸ್ಥಾನ ಕೊಟ್ಟಿರುವುದು ನಿಜ, ಹಾಗೆಯೇ ನಾನು ಸಚಿವ ಸ್ಥಾನದ ಆಕಾಂಕ್ಷಿಯು ಕೂಡ ಹೌದು ಎಂದು ಬೆಂಗಳೂರಲ್ಲಿ ಉಮಾಶ್ರೀ ಹೇಳಿಕೆ ನೀಡಿದರು.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮಾಶ್ರೀ ಪರಿಷತ್ ಉಪಸಭಾಪತಿ ಸ್ಥಾನ ಕೊಟ್ಟಿದ್ದು ನಿಜ ನಾನು ಸಚಿವ ಸ್ಥಾನದ ಆಕಾಂಕ್ಷಿ ಕೂಡ ಹೌದು ಇವು ಎರಡರ ಮಧ್ಯೆ ಯಾವುದು ಸಿಗಲಿದೆ ಎನ್ನುವುದಕ್ಕೆ ಕಾಯುತಿದ್ದೇನೆ. ನಮ್ಮ ಪಕ್ಷ ನನಗೆ ಅವಕಾಶ ಮಾಡಿಕೊಡಬಹುದು ಎನ್ನುವ ನಿರೀಕ್ಷೆ ಇದೆ.
ಅದರ ಮೇಲು ಪಕ್ಷ ಏನೇ ತೀರ್ಮಾನ ಕೈಗೊಂಡರು ಅದನ್ನು ನಾನು ಸ್ವೀಕಾರ ಮಾಡುತ್ತೇನೆ ಪಕ್ಷದಲ್ಲಿ ಎಷ್ಟು ವರ್ಷ ದೊಡ್ದಿದ್ದೇನೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಹಾಗಾಗಿ ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಉಮಾಶ್ರೀ ತಿಳಿಸಿದರು.


