ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದಾರೆ. ರಾಜಕೀಯವಾಗಿ ಹೆಚ್ಚು ಯೋಚನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮ್ಯಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ನಾನೇನೂ ಸೈಲೆಂಟ್ ಆಗಿಲ್ಲ.ನಾನೀಗ ಮುಖ್ಯಮಂತ್ರಿಯಲ್ಲ, ಬರಿ ಎಂಎಲ್ ಎ ಅಷ್ಟೇ. ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಜವಾಬ್ದಾರಿಗಳಿದ್ದವು. ಹಾಗಾಗಿ ಮಾತನಾಡಬೇಕಿತ್ತು. ಈಗ ಅಷ್ಟು ಜವಾಬ್ದಾರಿಗಳಿಲ್ಲ ಹಾಗಾಗಿ ಅಷ್ಟು ಮಾತನಾಡುತ್ತಿಲ್ಲ, ಹಾಗಂತ ನಾನು ಸೈಲೆಂಟ್ ಆಗಿಲ್ಲ ಎಂದರು.
ಹೆಚ್ಚು ಮಾತನಾಡಲ್ಲ ಅಂದ್ರೆ ಸೈಲೆಂಟಾಗಿದ್ದಾರೆ ಎಂದು ಅರ್ಥಾನಾ? ಎಂದು ಪ್ರಶ್ನಿಸಿದರು. ಇಂದು ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಭಾಅಗಿಯಾಗಿದ್ದೇನೆ ಇದು ಸೈಲೆಂಟಾ? ನಿನ್ನೆ ಅಧಿವೇಶನದಲ್ಲಿ ಭಾಗಿಯಾಗಿದ್ದೇನೆ. ಸೈಲೆಂಟ್ ಆಗಿದ್ದರೆ ಭಾಗಿಯಾಗುತ್ತಿದ್ದೆನಾ? ಮೊನ್ನೆ ಪುಸ್ತಕ ಬಿಡಿಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಇದೆಲ್ಲ ಸೈಲೆಂಟ್ ಅಂತಾ ಅರ್ಥಾನಾ? ಎಂದರು.


