LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಆರ್‌ಪಿಎಫ್ ಸಿಬ್ಬಂದಿ ಮೇಲೆ ರೇಜರ್ ಬ್ಲೇಡ್‌ನಿಂದ ಹಲ್ಲೆ : ನಟಿ ಅಂತರಾ ಬ್ಯಾನರ್ಜಿ ಅರೆಸ್ಟ್ 

Advertisement

ಮುಂಬೈ: ರೈಲಿನ ಎಸಿ (AC) ಬೋಗಿಯಲ್ಲಿ ಪ್ರಯಾಣಿಕರೊಂದಿಗೆ ಗಲಾಟೆ ಮಾಡಿಕೊಂಡು, ಆರ್‌ಪಿಎಫ್ (RPF) ಸಿಬ್ಬಂದಿ ಮೇಲೆ ರೇಜರ್ ಬ್ಲೇಡ್‌ನಿಂದ ಹಲ್ಲೆ ನಡೆಸಿದ ಆರೋಪದಡಿ ಮಾಡೆಲ್ ಹಾಗೂ ವೆಬ್‌ಸಿರೀಸ್ ನಟಿ ಅಂತರಾ ಬ್ಯಾನರ್ಜಿ (31) ಅವರನ್ನು ಮುಂಬೈನ ಬೊರಿವಲಿ ರೈಲ್ವೆ ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಆಗಸ್ಟ್ 12ರ ರಾತ್ರಿ ಅರಾವಳಿ ಎಕ್ಸ್‌ಪ್ರೆಸ್‌ನಲ್ಲಿ ಈ ಭೀಕರ ಘಟನೆ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ನಟಿ ಅಂತರಾ ಬ್ಯಾನರ್ಜಿ ಶೂಟಿಂಗ್‌ಗಾಗಿ ಸೂರತ್‌ಗೆ ತೆರಳುತ್ತಿದ್ದರು. ಅವರ ಬಳಿ ಸ್ಲೀಪರ್ ಕ್ಲಾಸ್ (Sleeper Class) ಟಿಕೆಟ್ ಮಾತ್ರ ಇತ್ತಾದರೂ, ಅವರು ಎಸಿ ಕೋಚ್‌ಗೆ ತೆರಳಿ ಸೀಟ್ ಆಕ್ರಮಿಸಿಕೊಂಡಿದ್ದರು.

ಆ ಸೀಟ್‌ನಲ್ಲಿದ್ದ ಪ್ರಯಾಣಿಕರು ಜಾಗ ಖಾಲಿ ಮಾಡುವಂತೆ ವಿನಂತಿಸಿದಾಗ ನಟಿ ನಿರಾಕರಿಸಿದ್ದಾರೆ. ಇದರಿಂದ ತೊಂದರೆಗೊಳಗಾದ ಪ್ರಯಾಣಿಕರು ಟಿಕೆಟ್ ಕಲೆಕ್ಟರ್ ಹರಿಕೇಶ್ ತ್ರಿಪಾಠಿಗೆ ದೂರು ನೀಡಿದ್ದು, ಅವರು ತಕ್ಷಣ ಆರ್‌ಪಿಎಫ್ ಸಿಬ್ಬಂದಿಯ ನೆರವು ಪಡೆದಿದ್ದಾರೆ.

ಬೊರಿವಲಿ ಮತ್ತು ದಹಾನು ನಡುವಿನ ರೈಲು ಮಾರ್ಗದಲ್ಲಿ ರಾತ್ರಿ ಸುಮಾರು 9.30 ರಿಂದ 10.50ರ ನಡುವೆ ಈ ರಂಪಾಟ ಉಂಟಾಗಿದೆ. ವಿಷಯ ತಿಳಿಯುತ್ತಿದ್ದಂತೆ ಆರ್‌ಪಿಎಫ್ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಯಾಮಿನಿಕಾಂತ್ ಮಿಶ್ರಾ ಹಾಗೂ ಕಾನ್‌ಸ್ಟೆಬಲ್ ರಾಜೇಶ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.

 ಈ ಸಂದರ್ಭದಲ್ಲಿ ಕೋಪಗೊಂಡ ನಟಿ, ಅಧಿಕಾರಿಗಳನ್ನು ತೀವ್ರವಾಗಿ ನಿಂದಿಸಿ, ಅವರ ಮೇಲೆ ರೇಜರ್ ಬ್ಲೇಡ್‌ನಿಂದ ದಾಳಿ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ಅಧಿಕಾರಿ ಮಿಶ್ರಾ ಹಾಗೂ ನಟಿ ಇಬ್ಬರೂ ಗಾಯಗೊಂಡಿದ್ದಾರೆ.

ಪರಿಸ್ಥಿತಿ ಕೈಮೀರಿ ಹೋಗಿದ್ದರಿಂದ ಆರ್‌ಪಿಎಫ್ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಎಸಿ ಬೋಗಿಯ ಬಾಗಿಲುಗಳನ್ನು ಬಂದ್ ಮಾಡಿದ್ದಾರೆ.

ಆ ವೇಳೆ ನಟಿ ಕೋಚ್‌ನ ಗಾಜನ್ನು ಒಡೆದು ರೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಂತಿಮವಾಗಿ ರೈಲು ದಹಾನು ನಿಲ್ದಾಣ ತಲುಪಿದಾಗ ನಟಿಯನ್ನು ಕೆಳಗಿಳಿಸಿ, ಸರ್ಕಾರಿ ರೈಲ್ವೆ ಪೊಲೀಸರಿಗೆ (GRP) ಹಸ್ತಾಂತರಿಸಲಾಗಿತ್ತು. 

ಈ ಘಟನೆಯಲ್ಲಿ ಆರ್‌ಪಿಎಫ್ ಅಧಿಕಾರಿಯ ಸಮವಸ್ತ್ರ ಹರಿದುಹೋಗಿದ್ದು, ಮೊಬೈಲ್ ಫೋನ್‌ಗೂ ಹಾನಿಯಾಗಿದೆ. ಅಲ್ಲದೆ ಎಸಿ ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಈ ಕುರಿತು ಆಗಸ್ಟ್ 13ರಂದು ಬೊರಿವಲಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಿಂಸಾತ್ಮಕ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸುವುದು ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದ ಆರೋಪ ಸೇರಿದಂತೆ ವಿವಿಧ ಕಠಿಣ ವಿಭಾಗಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಯ ನಂತರ ನಟಿಗೆ ನೋಟಿಸ್ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ರೈಲ್ವೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಮದುವೆಯಲ್ಲಿ ಭಾಗಿಯಾದ ಡಿ.ಕೆ.ಶಿ ದಂಪತಿ, ಸುದೀಪ್ ಶ್ರೀ ಭಗಂಡೇಶ್ವರ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ದಂಪತಿ ಭೇಟಿ : ನಾಡಿನಲ್ಲಿ ಉತ್ತಮ ಮಳೆ ಬೆಳೆಗೆ ಪಾರ್ಥನೆ ಆರ್‌ಪಿಎಫ್ ಸಿಬ್ಬಂದಿ ಮೇಲೆ ರೇಜರ್ ಬ್ಲೇಡ್‌ನಿಂದ ಹಲ್ಲೆ : ನಟಿ ಅಂತರಾ ಬ್ಯಾನರ್ಜಿ ಅರೆಸ್ಟ್ ಆಗಷ್ಟ್ ೧೯ ರಿಂದ ಇಂಗ್ಲೆAಡ್-ಪಾಕಿಸ್ತಾನ್ ೩ ಟೆಸ್ಟ್ಗಳ ಸರಣಿ ಆರಂಭ೪-೦ ರಿಂದ ಸರಣಿ ಗೆದ್ದ ಅಪಘಾನಿಸ್ತಾನ್ಎರಡನೇ ದಿನವೂ ಮಳೆರಾಯನ ಕಾಟಬಾಂಗ್ಲಾ ತಂಡಕ್ಕೆ ಇದು ಐತಿಹಾಸಿಕ ಗೆಲುವುಎಸ್‌ಡಿಎಂ ಚಾಲಕನಿಗೆ ಪೊಲೀಸ್ ಕಾನ್‌ಸ್ಟೆಬಲ್‌ ನಿಂದ ಮಸಾಜ್ : ವಿಡಿಯೋ ವೈರಲ್ ಸರ್ಕಾರಿ ಪ್ರೌಢಶಾಲೆ ಮಕ್ಕಳ ಬಿಸಿಯೂಟಕ್ಕೆ ದಿನಕ್ಕೆ ₹10.17 ಖರ್ಚು : ಇಲ್ಲಿದೆ ಸಂಪೂರ್ಣ ಲೆಕ್ಕಆಸ್ತಿಗಾಗಿ ಮೃತ ತಂದೆಯ ಹೆಬ್ಬೆರಳಚ್ಚನ್ನು ಹಾಕಿಸಿಕೊಂಡ ಮಗ