ಗಾಲೆ(ಶ್ರೀಲಂಕಾ): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವೂ ಮಳೆಯ ಕಾರಣ ಆಟ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ.
ಭೋಜನ ವಿರಾಮದ ನಂತರ ಆಟ ಆರಂಭವಾಗಿದ್ದು, ಎರಡನೇ ದಿನ ೪೩ ಓವರುಗಳ ಆಟ ಮಾತ್ರ ಸಾಧ್ಯವಾಗಿದೆ. ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಆರಂಭ ಮಾಡಿದ್ದ ಭಾರತ ತಂಡಕ್ಕೆ ವರುಣ ಅವಕೃಪೆ ತೋರಿದ್ದಾನೆ.


