LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಬಹಳ ಸಂತೋಷ" ಅವರ ಮಾತನ್ನು ಸ್ವಾಗತಿಸುತ್ತೇನೆ : ಸತೀಶ್ ಜಾರಕಿಹೊಳಿ ಮಾತಿಗೆ ಡಿಸಿಎಂ ಮಾರ್ಮಿಕ ನುಡಿ

Advertisement
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಉಲ್ಬಣಗೊಂಡಿರುವ ನಾಯಕತ್ವ ಬದಲಾವಣೆ ಗೊಂದಲವನ್ನು ಆದಷ್ಟು ಬೇಗ ನಿವಾರಿಸಲಾಗುವುದು ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದು, ಈ ಬಗ್ಗೆ ಡಿಸಿಎಂ ಡಿಕೆಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಈ ಬಗ್ಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಹಳ ಸಂತೋಷ" ಅವರ ಮಾತನ್ನು ಸ್ವಾಗತಿಸುತ್ತೇನೆ ಎಂದು ಖರ್ಗೆ ನೀಡಿರುವ ಆಶ್ವಾಸನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಸಿಎಂ ಸೋಶಿಯಲ್ ಮೀಡಿಯಾ ಪೋಸ್ಟ್ ಸಂಬಂಧ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದೇ ವೇಳೆ ಬಾಗಲಕೋಟೆ ಕಲ್ಲುತೂರಾಟ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾವು ಅಸ್ಸಾಂ ಸಭೆಗಳಿಂದ ತಡವಾಗಿ ವಾಪಸ್ಸಾಗಿರುವುದರಿಂದ ಆ ಘಟನೆಯ ಸಂಪೂರ್ಣ ವಿವರ ತಿಳಿದಿಲ್ಲ, ವರದಿ ಪಡೆದು ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ. ಶಾಸಕ ಧೀರಜ್ ಮುನಿರಾಜ್ ಅನುದಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ನಂತರ ಮಾತನಾಡುವುದಾಗಿ ಉತ್ತರಿಸಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್