LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ರಾಜಕಾರಣಿಗಳೊಂದಿಗೆ ಮಲಗು,ಇಲ್ಲಾ ತಲಾಖ್ ನೀಡುತ್ತೇನೆ : ಗಂಡನ ಕರಾಳ ಮುಖ ಬಯಲು

Advertisement

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ರಾಜಕಾರಣಿ, ಸಹಚರರೊಂದಿಗೆ ಮಲಗುವಂತೆ ಪತಿಯೇ ಪತ್ನಿಗೆ ಪೀಡಿಸುತ್ತಿದ್ದುದಲ್ಲದೇ ಆರು ಬಾರಿ ತಲಾಖ್‌ ನೀಡಿ, ಅಬಾರ್ಷನ್‌ ಮಾಡಿಸಿರುವಂತಹ ಘಟನೆ ನಡೆದಿದೆ.


ಪತಿಯ ಈ ವರ್ತನೆಯಿಂದ ರೋಸಿ ಹೋದ ಪತ್ನಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.ಸಂತ್ರಸ್ತೆ 2021 ರಲ್ಲಿ ಆರೋಪಿ ಯೂನಸ್‌ ಪಾಷಾನನ್ನು ವಿವಾಹವಾಗಿದ್ದಳು.

ಇದಾದ ನಾಲ್ಕು ತಿಂಗಳ ನಂತರ ಯೂನಸ್‌, ಆತನ ತಂದೆ ಚಿಂದ್‌ ಪಾಷಾ ಹಾಗೂ ತಾಯಿ ಪಹೀನ್‌ ತಾಜ್‌ ಸೇರಿಕೊಂಡು ಸಂತ್ರಸ್ತೆಗೆ ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ.

ಈ ನಡುವೆ ಆಕೆ ಗರ್ಭಿಣಿಯೂ ಆಗಿದ್ದು, ಆಕೆಯ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದಲ್ಲದೇ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದಾರೆಂದು ಆರೋಪಿಸಲಾಗಿದೆ.

ಈ ನಡವಳಿಕೆಯನ್ನು ಪ್ರಶ್ನಿಸಿದ ಪತ್ನಿಗೆ ಗನ್‌ ಸೇರಿದಂತೆ ಮಾರಕ ಆಯುಧಗಳನ್ನು ತೋರಿಸಿ ಸಂತ್ರಸ್ಥೆಗೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದರು. 2023 ರಲ್ಲಿ ಸಂತ್ರಸ್ಥೆ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಯೂನಸ್‌ಗೆ ರೌಡಿಗಳು ಹಾಗೂ ರಾಜಕಾರಣಿಗಳ ನಂಟು ಇದ್ದು, ಪತ್ನಿಯನ್ನು ಅವರಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ ಎಂಬುದು ತಿಳಿದು ಬಂದಿದೆ. ಇದರಿಂದ ಸಂತ್ರಸ್ಥೆ ಭಯಗೊಂಡು ತಾಯಿಯ ಮನೆಗೆ ಹೋಗಿ ಅಲ್ಲಿ ವಾಸವಾಗಿದ್ದಾಳೆ.

ಇತ್ತೀಚೆಗೆ ಮಹಿಳೆ ತನ್ನ ಬಟ್ಟೆಗಳನ್ನು ವಾಪಸ್‌ ತರಲು ಪತಿಯ ಮನೆಗೆ ಹೋದಾಗ ಪಾಷಾ ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಸಂತ್ರಸ್ಥೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಬನಶಂಕರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು