ಮಂಡ್ಯ: ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರಿಗೆ ಅಸಭ್ಯವಾಗಿ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪದಡಿ, ಸರ್ಕಾರಿ ಕಾಲೇಜಿನ ಉಪನ್ಯಾಸಕನೊಬ್ಬನಿಗೆ ವಿದ್ಯಾರ್ಥಿನಿಯರೇ ನೇರವಾಗಿ ಗೂಸಾ ನೀಡಿ ತರಾಟೆಗೆ ತೆಗೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.
ನಾಗಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಹೈಡ್ರಾಮಾ ನಡೆದಿದ್ದು, ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಗಂಗಾ ಎಂಬುವರೇ ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಗುರಿಯಾದ ವ್ಯಕ್ತಿ.
ಅಸಭ್ಯ ಚಾಟಿಂಗ್, ಕಿರುಕುಳದ ಆರೋಪ
ಕಾಲೇಜಿನ ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುತ್ತಿದ್ದ ಉಪನ್ಯಾಸಕ ಗಂಗಾ, ಅವರಿಗೆ ನಿರಂತರವಾಗಿ ವಾಟ್ಸಾಪ್ ಹಾಗೂ ಮೆಸೇಜ್‌ಗಳಮೂಲಕ ಚಾಟಿಂಗ್ ಮಾಡುತ್ತಿದ್ದ ಎನ್ನಲಾಗಿದೆ.
ಚಾಟಿಂಗ್ ವೇಳೆ 'ಐ ಲವ್ ಯೂ ಚಿನ್ನು' ಎಂದು ಬರೆಯುವುದು ಸೇರಿದಂತೆ ಅಸಭ್ಯವಾಗಿ ಸಂದೇಶಗಳನ್ನು ರವಾನಿಸಿ ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಉಪನ್ಯಾಸಕನ ಈ ಅಸಭ್ಯ ವರ್ತನೆಯಿಂದ ತೀವ್ರ ಬೇಸತ್ತಿದ್ದ ವಿದ್ಯಾರ್ಥಿನಿಯರು ಆತನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದರು.
ಉಪನ್ಯಾಸಕನ ವರ್ತನೆ ಮಿತಿ ಮೀರಿದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಕಾಲೇಜಿನ ಸಿಬ್ಬಂದಿ ಕೊಠಡಿಗೆ (ಸ್ಟಾಫ್ ರೂಂ) ನುಗ್ಗಿ ಉಪನ್ಯಾಸಕ ಗಂಗಾನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ಆತನನ್ನು ಎಳೆದಾಡಿ ಆಕ್ರೋಶ ಹೊರಹಾಕಿದ ವಿದ್ಯಾರ್ಥಿನಿಯರು, ಕಪಾಳಮೋಕ್ಷ ಮಾಡಿ ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.
ಈ ವೇಳೆ ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿಯುತ್ತಿರುವುದನ್ನು ಕಂಡ ಉಪನ್ಯಾಸಕ, ಮುಖ ಮುಚ್ಚಿಕೊಳ್ಳಲು ಮಾಸ್ಕ್ ಧರಿಸಿ, ತನ್ನ ತಪ್ಪನ್ನು ಒಪ್ಪಿಕೊಂಡು ವಿದ್ಯಾರ್ಥಿನಿಯರ ಮುಂದೆ ಕೈಮುಗಿದು ಕ್ಷಮೆಯಾಚಿಸಿದ್ದಾನೆ.ಈ


