ಸವದತ್ತಿ : ತಾಲೂಕಿನ ತಹಶೀಲ್ದಾರರಾಗಿ ಉತ್ತಮ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ಉಪ ಆಯುಕ್ತರಾಗಿ ಪದೋನ್ನತಿ ಹೊಂದಿದ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಸವದತ್ತಿ ನಗರ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಉತ್ತಮ ಆಡಳಿತ ಮತ್ತು ಕರ್ತವ್ಯನಿಷ್ಠೆಯಿಂದ ಜನರ ವಿಶ್ವಾ.. ಗಳಿಸಿದ್ದ ಹೆಗ್ಗನ್ನವರ ಅವರ ಮುಂದಿನ ಸೇವಾ ಜೀವ ಯಶಸ್ವಿಯಾಗಲಿ ಎ೦ದು ಸಂಘದ ಪದಾಧಿಕಾರಿಗಳ ಶುಭ ಹಾರೈಸಿದರು.
ಈ ವೇಳೆ ಸಂಘದ ಅಧ್ಯಕ್ಷ ಬಸವರಾಜ ಆಯಟ್ಟಿ, ಉಪಾಧ್ಯಕ್ಷ ಬಾಳಕೃಷ್ಣ ಮಿರಜಕರ, ಕಾರ್ಯದರ್ಶಿ ಇಮ್ತಿಯಾಜ್ ಡಾಲಾಯತ್, ಉಪ ಕಾರ್ಯದರ್ಶಿ ರವಿ ಗಿರಿಜಣ್ಣವರ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಲಮಾಣಿ, ಖಜಾಂಚಿ ಗಿರೀಶ್ ರೇವಡಿ, ಸದಸ್ಯರಾದ ಆಯ್ ಎಂ ಫಣಿಬಂದ್, ಅಸ್ಲಮ್ ನಿಪ್ಪಾಣಿ. ಬಾಬು ಶಿರೂರ್ ಮಹೇಶ್ ಮಿರಜಕರ ಉಪಸ್ಥಿತರಿದ್ದರು.
ವರದಿ: ಅಸ್ಲಂ ನಿಪ್ಪಾಣಿ


