ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ತಂಡಗಳು ಇಂದಿಲ್ಲಿನ ಈಡೆನ್ ಗಾರ್ಡೆನ್ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿಯ ಕಡೆಯ ಲೀಗ್ ಪಂದ್ಯದಲ್ಲಿ ಕಣಕ್ಕೆ ಇಳಿಯಲಿವೆ.
ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ಇದಕ್ಕೆ ಮುನ್ನ ಮುಂಬೈಯಲ್ಲಿ ನಡೆಯುವ ಪಂದ್ಯದಲ್ಲಿ ಒಂದು ವೇಳೆ ಮುಂಬೈ ಇಂಡಿಯನ್ಸ್ ಗೆದ್ದರೆ, ಈಡೆನ್ ಗಾರ್ಡೆನ್‌ನಲ್ಲಿ ನಡೆಯುವ ಈ ಲೀಗ್‌ನ ಕಡೆಯ ಪಂದ್ಯವೇ ಪ್ಲೇ ಆಪ್‌ನ ನಾಲ್ಕನೇ ತಂಡವನ್ನು ನಿರ್ಧರಿಸಲಿದೆ.
ಕೆಕೆಆರ್ ಈ ಪಂದ್ಯಕ್ಕೆ ಮುನ್ನ ೧೩ ಪಂದ್ಯಗಳಿAದ ೧೩ ಅಂಕಗಳಿಸಿದ್ದು, ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೇ, ಹಾಗೂ ಉತ್ತಮ ನೆಟ್ ರನ್‌ರೇಟ್‌ನಲ್ಲಿ ಗೆದ್ದರೆ ಕೆಕೆಆರ್ ಕೂಡ ನಾಲ್ಕನೇ ತಂಡವಾಗಿ ಪ್ಲೇ ಆಪ್ ಪ್ರವೇಶ ಪಡೆಯುವ ಅವಕಾಶ ಹೊಂದಿದೆ. ದೆಹಲಿ ಕ್ಯಾಪಿಟಲ್ಸ್ ಗೆದ್ದರೂ ಕೂಡ ಅದಕ್ಕೆ ಪ್ಲೇ ಆಪ್ ಪ್ರವೇಶ ಮಾಡುವ ಅವಕಾಶ ಇಲ್ಲ.

