ದಂಬುಲಾ (ಶ್ರೀಲಂಕಾ): ಭಾರತ ಎ, ತಂಡವು ಶ್ರೀಲಂಕಾದಲ್ಲಿ ನಡೆದಿರುವ ತ್ರಿಕೋನ ಕ್ರಿಕೆಟ್ ಸರಣಿಯ ಮಹತ್ವದ ಪಂದ್ಯದಲ್ಲಿ ಇಂದು ಅಪಘಾನಿಸ್ತಾನ ತಂಡವನ್ನು ೧೦೧ ರನ್‌ಗಳಿಂದ ಮಣಿಸಿ ಪಂದ್ಯಾವಳಿಯಲ್ಲಿ ಫೈನಲ್‌ಗೆ ಪ್ರವೇಶ ಪಡೆಯಿತು.
ಇಲ್ಲಿನ ದಂಬುಲಾ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ, ತಂಡವು ನಿಗದಿತ ೫೦ ಓವರುಗಳಲ್ಲಿ ೯ ವಿಕೆಟ್‌ಗೆ ೩೧೯ ರನ್‌ಗಳಿಸಿತ್ತು. ಅ¥ಘಾನಿಸ್ತಾನ್ ತಂಡವು ೩೬.೫ ಓವರುಗಳಲ್ಲಿ ೨೧೮ ರನ್‌ಗಳಿಗೆ ಆಲೌಟಾಗಿ ಪರಾಭವಗೊಂಡಿತು.
ಭಾರತ ಎ, ತಂಡವು ಫೈನಲ್‌ನಲ್ಲಿ ಅಪಘಾನಿಸ್ತಾನ ಅಥವಾ ಶ್ರೀಲಂಕಾ ಇದರಲ್ಲಿ ಯಾವ ತಂಡವನ್ನು ಎದುರಿಸಲಿದೆ ಎಂಬುದು ಲಂಕಾ ಹಾಗೂ ಅಪಘಾನ್ ನಡುವೆ ನಡೆಯುವ ಕಡೆಯ ಲೀಗ್ ಪಂದ್ಯದ ನಂತರ ಇತ್ಯರ್ಥವಾಗಲಿದೆ.
ನೆಟ್ ರನ್‌ರೇಟ್‌ನಲ್ಲಿ ಮುಂದಿರುವ ಶ್ರೀಲಂಕಾ ತಂಡವೇ ಫೈನಲ್ ತಲುಪುವ ಅವಕಾಶ ಹೆಚ್ಚಿದೆ. ಅಪಘಾನಿಸ್ತಾನ್ ಫೈನಲ್ ತಲುಪಲು ದೊಡ್ಡ ಅಂತರದ ಗೆಲುವು ಅಗತ್ಯ. ಭಾರತದ ಪರವಾಗಿ ನಿಶಾಂತ್ ಸಿಂಧು ೩೧ ಕ್ಕೆ ೪ ವಿಕೆಟ್ ಪಡೆದರಲ್ಲದೇ ಉಪಯುಕ್ತ ೨೧ ರನ್‌ಗಳನ್ನು ಕೂಡ ಗಳಿಸಿ ಪಂದ್ಯ ಶ್ರೇಷ್ಠರಾದರು.


