ರಾಯಚೂರು : ಗಾರಲದಿನ್ನಿ ಗ್ರಾಮದ ಕೆರೆ ಬಸವೇಶ್ವರ ದೇವಸ್ಥಾನಕ್ಕೆ ಧ್ವಜ ಸ್ತಂಭ ಸ್ಥಾಪನೆಗೆ ಕುಂಭ ಕಳಸ ಮೆರವಣಿಗೆಯೊಂದಿಗೆ ತರಲಾಯಿತು
ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಾರಲ ದಿನ್ನಿ ಗ್ರಾಮದಲ್ಲಿ ಕೆರೆ ಬಸವೇಶ್ವರ ದೇವಸ್ಥಾನ ಧ್ವಜಸ್ತಂಭ ಸ್ಥಾಪನೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಧ್ವಜ ಸ್ತಂಭವನ್ನು ಗ್ರಾಮದ ಮಹಿಳೆಯರೊಂದಿಗೆ ಕುಂಭ ಕಳಸದೊಂದಿಗೆ ಮೆರವಣಿಗೆ ಮಾಡುತ್ತಾ ವೀರಗಾಸೆಯರೊಂದಿಗೆ ವಚನ ಒಡವುಗಳು ಹೇಳುತ್ತಾ ಅತಿ ವಿಜ್ರಮಣೆಯಿಂದ ಕೆರಬಸವೇಶ್ವರ ದೇವಸ್ಥಾನಕ್ಕೆ ಧ್ವಜ ಸ್ತಂಭವನ್ನು ತರಲಾಯಿತು .
ಈ ಧ್ವಜಸ್ತಂಬ ಮೆರವಣಿಗೆ ಕಾರ್ಯಕ್ರಮಕ್ಕೆ ಊರಿನ ಹಿರಿಯ ಮುಖಂಡರಾದ' ದೊಡ್ಡ ಶರಣಪ್ಪ ಗೌಡ ಪೊಲೀಸ್ ಪಾಟೀಲ್, ಸಿದ್ದನಗೌಡ ಪೊಲೀಸ್ ಪಾಟೀಲ್,ಹತ್ತಿ ಮಿಲ್ ಮಲಿಕ ವೀರನಗೌಡ ಪೊಲೀಸ್ ಪಾಟೀಲ್, ಬಿಕಂ ಶರಣಪ್ಪ ಗೌಡ,ಅನಿಲ್ ಕುಮಾರ್, ಚಂದ್ರಶೇಖರ ಗೌಡ ಪೊಲೀಸ್ ಪಾಟೀಲ್,ಗ್ರಾಮದ ವೀರಶೈವ ಸಮಾಜದವರು, ಮತ್ತು ಊರಿನ ಎಲ್ಲಾ ಸರ್ವ ಸಮುದಾಯದವರೊಂದಿಗೆ ಮೆರವಣಿಗೆ ಕಾರ್ಯಕ್ರಮ ನಡೆಸಲಾಯಿತು.
ವರದಿ : ಗಾರಲದಿನ್ನಿ ವೀರನಗೌಡ

