Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆ ಜಿಟಿ-ಆರ್‌ಸಿಬಿ ನಡುವೆ ಐಪಿಎಲ್ ಫೈನಲ್

ಗೆದ್ದ ತಂಡಕ್ಕೆ ಎರಡನೇ ಬಾರಿ ಕಪ್ ಎತ್ತಿ ಹಿಡಿಯುವ ಸೌಭಾಗ್ಯ

Advertisement


ಅಹ್ಮದಾಬಾದ್: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ತಲಾ ಒಂದು ಬಾರಿ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿವೆ.
ಎರಡನೇ ಬಾರಿ ಕಪ್ ಎತ್ತಿ ಹಿಡಿಯುವ ತಂಡ ಯಾವುದು ಎಂಬುದು ನಾಳೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿರ್ಧಾರವಾಗಲಿದೆ.
ಈ ಬಾರಿ ಫೈನಲ್‌ಗೆ ತಲುಪಿರುವ ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ನಾಳೆ ಫೈನಲ್ ಪಂದ್ಯದಲ್ಲಿ  ಕಣಕ್ಕೆ ಇಳಿಯಲಿವೆ.
    ಎರಡು ತಂಡಗಳು ಎದುರು ಬದುರಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ೫-೪ ರಿಂದ ಮುನ್ನಡೆ ಪಡೆದಿದೆ. ಆದರೆ ಅಹ್ಮದಾಬಾದ್‌ನಲ್ಲಿ ಮಾತ್ರ ಉಭಯ ತಂಡಗಳು ೧-೧ ರ ಸಮಸ್ಥಿತಿಯಲ್ಲಿವೆ. ಈ ಎರಡೂ ತಂಡಗಳ ಚೇಸಿಂಗ್ ದಾಖಲೆಯನ್ನು ಗಮನಿಸಿದರೆ ೯ ಪಂದ್ಯಗಳ ಪೈಕಿ ೮ ರಲ್ಲಿ ಈ ಎರಡು ತಂಡಗಳು ಚೇಸಿಂಗ್‌ನಲ್ಲಿ ಗೆಲುವು ದಾಖಲಿಸಿವೆ.
    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರನ್‌ಮಳೆ ಸುರಿಯುವ ಸಾಧ್ಯತೆ ಇದ್ದು, ಟಾಸ್ ಗೆದ್ದ ತಂಡವು ನಾಳೆ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಗುಡ್ಡದಂತಹ ಮೊತ್ತ ದಾಖಲಿಸುವ ಉತ್ಸಾಹದಲ್ಲಿವೆ. ಈ ಮೈದಾನದಲ್ಲಿ ಆರ್‌ಸಿಬಿ ೨೫೫ ರನ್‌ಗಳನ್ನು ಗಳಿಸಿದೆ. ಮೇಲ್ನೋಟಕ್ಕೆ ಆರ್‌ಸಿಬಿ ಬಲಾಢ್ಯ ತಂಡವಾಗಿದೆ. ಆದರೆ ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿರುವ ಜಿಟಿ ತಂಡ ಫೈನಲ್ ಗೆದ್ದರೂ ಅಚ್ಚರಿ ಪಡುವಂತಿಲ್ಲ. ಪಂದ್ಯ ಕುತೂಹಲ ಕೆರಳಿಸಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನಿರಾಸೆನಾಳೆ ಜಿಟಿ-ಆರ್‌ಸಿಬಿ ನಡುವೆ ಐಪಿಎಲ್ ಫೈನಲ್ರಿಷಬ್ ಪಂತ್ ಐಪಿಎಲ್‌ನ ಮೊದಲ ತಲೆದಂಡಸರ್ಕಾರ ರಚಿಸಲು ಡಿ.ಕೆ.ಶಿವಕುಮಾರ್ ಗೆ ರಾಜ್ಯಪಾಲರ ಆಹ್ವಾನಈಜಲು ತೆರಳಿದ್ದ ಮೂವರು ಬಾಲಕರು ನೀರಲ್ಲಿ ಮುಳುಗಿ ದುರ್ಮರಣಡಿ.ಕೆ. ಶಿವಕುಮಾರ್ ಅವರು ಸಿಎಲ್‌ಪಿ ನಾಯಕರಾಗಿ ಆಯ್ಕೆ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಸವದಿಯವರಿಗೆ  ಸಚಿವ ಸ್ಥಾನ ನೀಡಲು ಸಿ ಎಸ್ ನೇಮಗೌಡ ಆಗ್ರಹ ಸರ್ಕಾರಗಳ ಕೈಲಾಗದ ಪುಣ್ಯ ಕಾರ್ಯಗಳನ್ನು ಧರ್ಮಸ್ಥಳ ಯೋಜನೆ ಮಾಡುತ್ತಿದೆ : ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ ಲಕ್ಷ್ಮೀನಾರಾಯಣ್ ಶ್ಲಾಘನೆಅಶಕ್ತರಿಗೆ ಆಸರೆಯಾದ ಧರ್ಮಸ್ಥಳ ಸಂಸ್ಥೆಯ ಜನಮಂಗಲ ಕಾರ್ಯಕ್ರಮ ವಸಂತ ಎಸ್ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆ