ಗಯಾನಾ(ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ನಾಳೆ ಇಲ್ಲಿನ ಪ್ರೊವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತೀಯ ಕಾಲಮಾನ ಇಂದು ಮಧ್ಯರಾತ್ರಿ ೧೨ ಗಂಟೆಗೆ ಪಂದ್ಯ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯಗಳಿಸಿತ್ತು.


