Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ಬಂದ್‌ ನಿರ್ಧಾರವನ್ನು ಕೈಬಿಡಬೇಕು : ಡಿ. ಕೆ ಶಿವಕುಮಾರ್ 

Advertisement

ಬೆಂಗಳೂರು: ರಾಜ್ಯದ ಹಿತರಕ್ಷಣೆ ವಿಷಯದಲ್ಲಿ ಸರ್ಕಾರ ಎಂದಿಗೂ ಜನರಿಗೆ ಮತ್ತು ಹೋರಾಟಗಾರರಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಆದ್ದರಿಂದ ಕರೆ ನೀಡಿರುವ ಕರ್ನಾಟಕ ಬಂದ್‌ ನಿರ್ಧಾರವನ್ನು ಕೈಬಿಡಬೇಕು ಎಂದು ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್‌ ಸರ್ಕಾರದ ಪರವಾಗಿ ಕನ್ನಡಪರ ಹಾಗೂ ರೈತ ಸಂಘಟನೆಗಳಿಗೆ ನಮ್ರತೆಯಿಂದ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡಪರ ಹಾಗೂ ರೈತ ಪರ ಸಂಘಟನೆಗಳು ನಡೆಸುತ್ತಿರುವ ಹೋರಾಟವನ್ನು ಸರ್ಕಾರ ಗೌರವಿಸುತ್ತದೆ.

ಹೋರಾಟ ಮಾಡುವುದು ತಪ್ಪು ಎಂದು ನಾವು ಹೇಳುವುದಿಲ್ಲ, ಆದರೆ ಎಲ್ಲರೂ ಪ್ರಸ್ತುತ ಇರುವ ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳಬೇಕು. 

ರಾಜ್ಯದ ಪ್ರಜೆಗಳು ಮತ್ತು ಹೋರಾಟಗಾರರು ನಮ್ಮನ್ನು ನಂಬಿ ಅಧಿಕಾರ ಕೊಟ್ಟಿದ್ದಾರೆ. ನಿಮ್ಮ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಯಾವುದೇ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದರು.

ರಾಜ್ಯಕ್ಕೆ ಬಂದ್‌ ಮಾಡುವುದರಿಂದ ಯಾವುದೇ ಸಮಸ್ಯೆಗೆ ತಕ್ಷಣದ ಪರಿಹಾರ ಸಿಗುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ಬಂದ್‌ ಆಚರಿಸುವುದರಿಂದ ಸಾರ್ವಜನಿಕರಿಗೆ, ದಿನಗೂಲಿ ನೌಕರರಿಗೆ ಎಷ್ಟೊಂದು ತೊಂದರೆಯಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕಿದೆ.

 ಪ್ರಸ್ತುತ ವಿಷಯದಲ್ಲಿ ಕಾನೂನು ಚೌಕಟ್ಟು ಹಾಗೂ ನ್ಯಾಯಾಲಯದ ಆದೇಶಗಳ ಪರಿಮಿತಿಗಳಿದ್ದು, ಪರಿಸ್ಥಿತಿಯನ್ನು ಸರ್ಕಾರ ಜಾಣ್ಮೆಯಿಂದ ನಿರ್ವಹಿಸುತ್ತಿದೆ. ಹೀಗಾಗಿ ಬಂದ್‌ ತೀರ್ಮಾನವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಕೋರಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಸಿಪಿ, ಟಿ ಎಸ್ ಪಿ ಅನುದಾನ ದುರ್ಬಳಕೆ  ಆರೋಪ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ319 ಕೆಎಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ :  ನಾಳೆಯಿಂದ ಅರ್ಜಿ ಸಲ್ಲಿಕೆ ಪ್ರಾರಂಭ ಮೊಬೈಲ್ ತರಬೇಡ ಎಂದಿದಕ್ಕೆ ಮುಖ್ಯ ಶಿಕ್ಷಕಿಯ ಕಾರಿನ ಮೇಲೆಯೇ ಕಲ್ಲು ಎತ್ತಹಾಕಲು ಮುಂದಾದ ವಿದ್ಯಾರ್ಥಿಕರ್ನಾಟಕ ಬಂದ್‌ ನಿರ್ಧಾರವನ್ನು ಕೈಬಿಡಬೇಕು : ಡಿ. ಕೆ ಶಿವಕುಮಾರ್ ಸೋಮವಾರದಂದೇ ನೂತನ ಸಚಿವರ ಪ್ರಮಾಣವಚನ : ಡಿ. ಕೆ ಶಿವಕುಮಾರ್ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪನೆಗೆ ಅರ್ಜಿ ಆಹ್ವಾನ : ಶ್ರೀನಾಥ್ ಬಾಬುನಾಳೆ ರವಿವಾರ 2 ಆಗಸ್ಟ ರಂದು ಬೃಹತ ರಕ್ತದಾನ ಶಿಬಿರ ಮಹಾರಾಷ್ಟ್ರದಲ್ಲಿ ಘೋರ ದುರಂತ : ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 9 ಜನ ದುರ್ಮರಣ ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ : ಕನ್ನಡ ಪರ ಸಂಘಟನೆಗಳ ಕರೆಬೆನ್ನಿಗೆ ಬಿದ್ದ ಪೈಪ್ ಏಟು, ಮಕ್ಕಳ ಆರ್ತನಾದ: ಪಾವಗಡ ವಸತಿ ಶಾಲೆಯಲ್ಲಿ ಅಡಗಿದೆಯಾ ಕ್ರೌರ್ಯದ ಸಾಮ್ರಾಜ್ಯ