Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಕೆಆರ್‌ಎಸ್‌ ಆಗ್ರಹ!

Advertisement

ಸಿಂಧನೂರು : ರಾಯಚೂರು ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಕರ್ನಾಟಕ ರೈತ ಸಂಘ (ಕೆಆರ್‌ಎಸ್‌- ಎ ಐ ಯು ಕೆ ಎಸ್) ತಾಲೂಕ ಸಮಿತಿ ಸಿಂಧನೂರು ಮಾನ್ಯ ತಹಸಿಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಾನವಿ ಸಲ್ಲಿಸಿದರು ನಂತರ ಮಾತನಾಡಿದ ಅವರು ಈ ಭಾರಿ ಮಳೆ ರೈತರಿಗೆ ಸಂಪೂರ್ಣ ಕೈ ಕೊಟ್ಟಂತೆ ಕಾಣಿಸುತ್ತದೆ  ಹಾಗಾಗಿ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪ್ರತಿ ವರ್ಷ ಮೇ-ಜೂನ್ ತಿಂಗಳಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು ಮಳೆ ಬಾರದ ಕಾರಣ ಎಲ್ಲಾ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ ಈ ಹಿನ್ನೆಲೆಯಲ್ಲಿ ರೈತರು, ಕಾರ್ಮಿಕರು, ಇತರೆ ಜನ ವರ್ಗದವರು ಕೃಷಿ ಚಟುವಟಿಕೆಗಳು ಇಲ್ಲದೆ ಮಂಕಾಗಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರ  ರೈತರ ನೆರವಿಗೆ ಬಂದು ರಾಯಚೂರು ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಪ್ರವೇಶವೆಂದು ಘೋಷಿಸಬೇಕು  ಈ ವರ್ಷ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ನಿಲ್ಲಿಸಲಾಗಿದೆ ಹಾಗಾಗಿ 2002 ಕ್ಕಿಂತ ಮುಂಚೆ ಜಾರಿಯಲ್ಲಿರುವ ಹಳೆ ಮಾಧರಿಯ"ಕೂಲಿಗಾಗಿ ಕಾಳು ಯೋಜನೆ" ಪ್ರಾರಂಭಿಸಬೇಕು ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಕರಡು ಕಾಯ್ದೆ ಮತ್ತು ವಿದ್ಯುತ್ ಚೌಕಟ್ಟು ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಇದರ ಭಾಗವಾಗಿ ಟಾಟಾ ಕಂಪನಿಗೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡುವ ಕಾರ್ಯಕ್ಕಾಗಿ ಗುತ್ತಿಗೆ ಪಡೆಯಲು ಅರ್ಜಿ ಸಲ್ಲಿಸಿವೆ. ಸರ್ಕಾರ ಯಾವ ಕಾರಣಕ್ಕೂ ಟಾಟಾ ಕಂಪನಿಗೆ ವಿದ್ಯುತ್ ಸರಬರಾಜು ಮಾಡುವ ಗುತ್ತಿಗೆಯನ್ನು ಕೊಡಬಾರದು ಒಂದು ವೇಳೆ ಗುತ್ತಿಗೆ ಕೊಟ್ಟರೆ, ರೈತರ ಪಂಪು ಸೆಟ್ಟುಗಳಿಗೆ ಮತ್ತು ಬೋರವೆಲ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ರೈತರಿಂದ ದೊಡ್ಡ ಮಟ್ಟದ ಹಣ ಲೂಟಿಗೆ ಅವಕಾಶ ಮಾಡಿದಂತಾಗುತ್ತದೆ ಸರ್ಕಾರ ಈ ಮೇಲಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸ ಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ : ಬಿಎನ್.ಯರದಿಹಾಳ ಜಿಲ್ಲಾ ಕಾರ್ಯದರ್ಶಿ ಸಿಪಿಐ ಎಂಎಲ್ ಮಾಸ್ ಲೈನ್, ರಮೇಶ್ ಪಾಟೀಲ್ ಬೇರಿಗಿ ತಾಲೂಕ ಅಧ್ಯಕ್ಷರು ಕೆಆರ್‌ಎಸ್‌, ಸೇರಿದಂತೆ ಬಸಪ್ಪ ಕಡುಬೂರು, ವೆಂಕಟೇಶ್ ಉದ್ಬಾಳ. ಗಂಗರಾಜ ಭೀಮರಾಜ ಕ್ಯಾಂಪ್, ನಿಂಗಪ್ಪ ಚಿಕ್ಕಬೇರ್ಗಿ ಬಾಲಾಜಿ ಉದ್ಬಾಳ. ಯಮನೂರಪ್ಪ ರತ್ನಾಪುರಹಟ್ಟಿ, ಖಾಜಾಸಾಬ್. ಅಸ್ಲಾಂ, ಮರಿಯಪ್ಪ ನಾಯಕ ಬೀರಗಿ. ಕರಿಯಪ್ಪ  ತುರುವಿಹಾಳ, ನಿಂಗಪ್ಪ, ಲಾಲ ಸಾಬ್ ಜಿಲಾಬಿ, ಮಹಮ್ಮದ್ ಅಲಿ, ನಿಂಗಪ್ಪ ಜಿ. ಇದ್ದರು


ವರದಿ : ಬಸವರಾಜ ಬುಕ್ಕನಹಟ್ಟಿ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಏಷ್ಯಾ ಇಂಟರ್ ನ್ಯಾಷನಲ್  ಕಲ್ಚರ್ ಅಕಾಡೆಮಿ ಯುನಿವರ್ಸಿಟಿಯಿಂದ  ಕಾಳೇಗೌಡರಿಗೆ, ಚೆನ್ನಕೇಶವ ಗೌರವ ಡಾಕ್ಟರೇಟ್ ಪದವಿಗೆ ಅಭಿನಂದಿಸಿದ : ಚಿಂತಕ ಡಾ.  ಸಂಗನ ಬಸಪ್ಪ ಬಿರಾದಾರ್ಹನಿಟ್ರ್ಯಾಪ್ ಮೂಲಕ ಸಹೋದ್ಯೋಗಿಯನ್ನೇ ಕಿಡ್ನ್ಯಾಪ್ : 8 ಜನ ಅರೆಸ್ಟ್ ರಾಯಚೂರು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಕೆಆರ್‌ಎಸ್‌ ಆಗ್ರಹ!ಶಾಸಕ ವಿಜಯಾನಂದ ಕಾಶಪ್ಪನವರ 55.ನೇ ಹುಟ್ಟು ಹಬ್ಬ  ಪ್ರಯುಕ್ತ ವಿದ್ಯಾರ್ಥಿಗಳಿಗೆ  55 ಸಸಿಗಳ ಕೊಡುಗೆಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಘೋರ ದುರಂತ : 7 ಕಾರ್ಮಿಕರು ಸ್ಥಳದಲ್ಲೇ ಸಾವುವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೇಕರಿ ಭಸ್ಮ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ರೇಷನ್ ನಲ್ಲಿ ಸಿಗಲಿದೆ ಕ್ವಾಲಿಟಿ ಅಕ್ಕಿ ರೇಣುಕಾಸ್ವಾಮಿ ಕೊಲೆ ಕೇಸ್ : ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ, ಡಿಬಾಸ್ ಅಡ್ಮಿನ್ ಅರೆಸ್ಟ್ಗುಟ್ಕಾ ಉಗುಳಲು ಬಸ್ ಕಿಟಕಿಯ ಹೊರಗೆ ತಲೆ ಹಾಕಿದ್ದ ಯುವಕ : ಟಿಪ್ಪರ್ ಬಡೆದು ರಸ್ತೆಗೆ ಬಿದ್ದ ತಲೆಜುಲೈ 10ರಂದು ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ : ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಭಾಗಿ