Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೈಲಿಗೆ ಹಾಕಿಸಬೇಕು ಎಂದು ಕುಮಾರಸ್ವಾಮಿ ಕುಟುಂಬ ಷಡ್ಯಂತ್ರ ನಡೆಸುತ್ತಿದ್ದಾರೆ :ಡಿಕೆಶಿ 

Advertisement
ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೈಲಿಗೆ ಹೋಗುವ ದಿನ ಹತ್ತಿರ ಬಂದಿದೆ ಅವರು ಜೈಲಿಗೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಜೈಲಿಗೆ ಹಾಕಿಸಬೇಕು ಎಂದು HD ಕುಮಾರಸ್ವಾಮಿ ಕುಟುಂಬ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ HD ಕುಮಾರಸ್ವಾಮಿ ಮೊದಲಿನಿಂದಲೂ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಅವರ ಕುಟುಂಬದಿಂದ ದೊಡ್ಡ ಷಡ್ಯಂತರ ನಡೆದಿದೆ.

ಜೈಲಿಗೆ ಹೋಗೋ ದಿನ ಹತ್ತಿರ ಬಂದಿದೆ ಎಂದಿದ್ದಾರೆ. ಹಬ್ಬ ಆಗಲಿ ಅವರು ಏನೇನು ಹೇಳುತ್ತಾರೆ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಮೊದಲಿನಿಂದಲೂ ಕೂಡ ಅವರ ಕುಟುಂಬ ನನ್ನ ಮೇಲೆ ದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ.

ಇದು ಇವತ್ತಿಂದಲ್ಲ ಈ ಹಿಂದೆ ನನ್ನ ತಂಗಿ ಮೇಲೆ, ತಮ್ಮನ ಮೇಲೆ, ಎಲ್ಲರ ಮೇಲು ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ಚೀಫ್ ಮಿನಿಸ್ಟರ್ ಆದಾಗ ಜೈಲಿಗೆ ಹಾಕಿಸೋಕೇ ಪ್ರಯತ್ನ ಮಾಡಿದರು.

ಅದಾದ್ಮೇಲೆ ಬೇಕಾದಷ್ಟು ಷಡ್ಯಂತ್ರ ಮಾಡಿದರು ಎಲ್ಲದಕ್ಕೂ ದಸರಾ ಹಬ್ಬ ಆದಮೇಲೆ ಉತ್ತರ ಕೊಡುತ್ತೇನೆ. ಪಾಪ ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ ಎಂದು ತಿರುಗೇಟು ನೀಡಿದ್ದಾರೆ.

ಇದೆ ವೇಳೆ ಕುಮಾರಸ್ವಾಮಿ ಚರ್ಚೆ ಮಾಡಲು ಡಿಬೇಟ್ಗೆ ಬರಲಿ ಎಂದು ನೇರವಾಗಿ ಪಂಥಾಹ್ವಾನ ನೀಡಿದ್ದಾರೆ. ಅವರನ್ನು ಪಕ್ಕದಲ್ಲಿ ಕೂರಿಸಿ ಚರ್ಚೆ ಮಾಡೋಣ. ಈ ಹಿಂದೆ ಸಾತನೂರಲ್ಲಿ 20-20 ಪಂದ್ಯ ನಡೆದಿತ್ತು. ಅಸೆಂಬ್ಲಿ ಗೆ ಕರೆದಿದ್ದೆ ಪಾಪ ಪಾರ್ಲಿಮೆಂಟ್ ಹೋದರು.

HD ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡದೆ ಚರ್ಚೆಗೆ ಬರಲಿ ನನ್ನಲ್ಲಿರುವ ಅಗಾಧ ಬಂಡಾರದಿಂದ ಎಲ್ಲವನ್ನು ತೆಗೆಯುತ್ತೇನೆ ಅವರು ಕೂಡ ಬತ್ತಳಿಕೆಯಲ್ಲಿ ಏನೇನಿದೆ ಎಲ್ಲವನ್ನು ತೆಗೆಯಲಿ. ಕುಮಾರಸ್ವಾಮಿ ಚರ್ಚೆಗೆ ನೇರವಾಗಿ ಡಿಬೇಟ್ಗೆ ಬರಲಿ ಎಂದು ಪಂಥಹ್ವಾನ ನೀಡಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್