ಹುಬ್ಬಳ್ಳಿ :ವಾಣಿಜ್ಯ ನಗರಿ ಎಂದೇ ಖ್ಯಾತವಾಗಿರುವ ಹುಬ್ಬಳ್ಳಿಯ ಅವಸ್ಥೆ ನೋಡಿ ವಿಮಾನ ನಿಲ್ದಾಣದಿಂದ ನಗರದ ಹೊಸ ಬಸ ನಿಲ್ದಾಣ ಕಡೆ ಹೋಗುವ ಮದ್ಯ ಅಕ್ಷಯ ಪಾರ್ಕ್ ನಲ್ಲಿ ಸಿಗ್ನಲ್ ಗಳು ಇದ್ದರೂ ಕೆಲಸ ಮಾಡುತ್ತಿಲ್ಲ ಇಲ್ಲಿ ನಾಲ್ಕು ದಿಕ್ಕಿನಿಂದ ಬರುವ ವಾಹನಗಳಿಂದ ಟ್ರಾಫಿಕ್ ಜಾಮ್ ಮಾಡುವುದಲ್ಲದೆ ಸಾರ್ವಜನಿಕರು ರಸ್ತೆ ದಾಟಲು ಪರದಾಡುತ್ತಿರುವ ದೃಶ್ಯ ದಿನನಿತ್ಯ ಸಾಮಾನ್ಯವಾಗಿದೆ. ಹಾಗೂ ಇಲ್ಲಿನ ಮತ್ತೊಂದು ಅವಸ್ಥೆ ಇನ್ರಾಬೀಟ್ ಶಾಪಿಂಗ್ ಮಾಲ್ ನಿಂದ ,ವಿ ಟು ಶಾಪಿಂಗ್ ಮಾಲ್ ಕಡೆ ಹೋಗುವ ರಸ್ತೆ ಬದಿಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದ್ದರು ಅಡ್ಡಾಡಿದ್ದಿ ವಾಹನ ಪಾರ್ಕ್ ಮಾಡುವ ದೃಶ್ಯ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಪೊಲೀಸರು ದಿನನಿತ್ಯ ಇವರುಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಿಂದ ಆಗ್ರಹವಾಗಿದೆ.
ಇದೇ ರೀತಿ ಶಿವಸಾಗರ ಹೋಟೆಲ್ ಸರ್ಕಲ್, ಹರ್ಷ ಫಾಸ್ಟ್ ಫುಡ್ ಸರ್ಕಲ್, ಎಂ. ಒನ್, ಡಿಪೋ ಸರ್ಕಲ್, ಭಾರತ್ ಮಿಲ್ ಸರ್ಕಲ್, ವಿವೇಕಾನಂದ ಹಾಸ್ಪಿಟಲ್ ಹತ್ತಿರ ಸರ್ಕಲ್ , ಕೇಶ್ವಪುರ ಸರ್ಕಲ್, ವಾಣಿವಿಲಾಸ್ ಸರ್ಕಲ್ ಮೇಲಿನ ಎಂಟು ಸರ್ಕಲ್ ಗಳು ಹುಬ್ಬಳ್ಳಿಯಲ್ಲಿರುವ ಮುಖ್ಯ ರಸ್ತೆಗಳು ಆದರೂ ಇಲ್ಲಿನ ಕೆಲವು ಸರ್ಕಲ್ಗಳಲ್ಲಿ ಸಿಗ್ನಲ್ ಗಳು ಇದ್ದರೂ ಕೆಲಸ ನಿರ್ವಹಿಸುತ್ತಿಲ್ಲ ಒಂದಿಷ್ಟು ಕಡೆ ಸಿಗ್ನಲ್ ಗಳೇ ಇಲ್ಲ ಸಂಬಂಧ ಪಟ್ಟ ಇಲಾಖೆಗಳಾಗಲಿ ಅಥವಾ ಅಧಿಕಾರಿಗಳಾಗಲಿ ಜಾಣ ಕುರುಡರು ಅಥವಾ ಜಾಣ ಮೌನರೋ ಅಥವಾ ಇವರ ಗಮನಕ್ಕೆ ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಮೇಲಿನ ಕೆಲವು ಸರ್ಕಲ್ ಗಳಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ ಇಲ್ಲಿಯಾದರೂ ಸಿಗ್ನಲ್ ಗಳು ಅಳವಡಿಸಬೇಕೆಂದು ಸಾರ್ವಜನಿಕರಿಂದ ಒತ್ತಾಯವಾಗಿದೆ.
ವರದಿ: ಗುರುರಾಜ ಹಂಚಾಟೆ

