ಚಿಂಚೋಳಿ: ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯ ಚಿಂಚೋಳಿಯಲ್ಲಿ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷರಾದ ಬಸವರಾಜ್ ಮಲ್ಲಿಯವರು ಪಡಿತರ ನ್ಯಾಯ ಬೆಲೆ ಅಂಗಡಿಯ ಮಾಲಕರಿಗೆ ಸಭೆಯ ಕರೆಯಲಾಯಿತು ಈ ಸಭೆಯಲ್ಲಿ ತಾಲೂಕು ದಂಡ ಅಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷಕುಮಾರ ಚೌವ್ಹಾಣ ಹಾಗೂ ಗ್ಯಾರಂಟಿ ಸಮಿತಿಯ ಸರ್ವ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು.ತಾಲೂಕಿನಲ್ಲಿ ಕೆಲವು ಪಡಿತರ ನ್ಯಾಯ ಬೆಲೆ ಅಂಗಡಿಗಳ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ ಹಾಗೂ ರೇಷನ್ ಕೊಡಬೇಕಾದರೆ ವ್ಯಕ್ತಿಯಲ್ಲಿ ಹಣವನ್ನು ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಬಹಳಷ್ಟು ದೂರು ಬಂದಿದೆ ಅಂತಹ ಅಂಗಡಿಗಳ ಮೇಲೆ ನಾವು ನಿಗವಹಿಸಿ ತಮ್ಮ ಪರವಾನಿಗೆಯನ್ನು ರದ್ದು ಮಾಡುತ್ತೇವೆ ಎಂದು ತಾಲೂಕ ದಂಡಾಧಿಕಾರಿಗಳು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ ಪ್ರತಿ ತಿಂಗಳ ಬರುವಂತ ರೇಷನ್ ಫಲಾನುಭವಿಗಳಿಗೆ ದಕ್ಕಬೇಕು ಒಂದು ವೇಳೆ ಬೇರೆ ರೀತಿಯಲ್ಲಿ ಮಾರಾಟ ಮಾಡಿದರೆ ಅಂತಹ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಹೇಳಿದರು.

ತಾಲೂಕಿನಲ್ಲಿರುವಂತಹ ರೇಷನ್ ಅಂಗಡಿ ಪರವಾನಿಗೆ ದಿನಾಂಕ ಮುಗಿದುಹೋಗಿದೆ ಅಂತಹ ಅಂಗಡಿಗಳು ಮತ್ತೊಮ್ಮೆ ಪರವಾನಿಗೆ ಪಡೆಯಬೇಕೆಂದು ಹೇಳಿದರು ಹಲವಾರು ಸಾರ್ವಜನಿಕರು ರೇಷನ್ ಅಕ್ರಮವಾಗಿ ಮಾರುಕೊಳ್ಳುತ್ತಾರೆ ಅಂತಹ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ಯಾರಂಟಿ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾನೂನು ಬಹಿರ ಕೃತ್ಯಗಳನ್ನು ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು ನಂತರ ತಾಲೂಕು ಆಹಾರ ಮತ್ತು ಸರಬರಾಜು ಇಲಾಖೆ ಅಧಿಕಾರಿಗಳಾದ ಉಷಾ ಮೇಡಂ ಅವರಿಗೆ ತಾವುಗಳು ತಾಲೂಕಿನಲ್ಲಿರುವಂತಹ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಯಾವುದೇ ರೀತಿ ಅನ್ಯಾಯ ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಯಾರಾದರೂ ಅಕ್ರಮವಾಗಿ ಅಕ್ಕಿ ಮಾರಾಟ ಮಾಡುತ್ತಿದ್ದರೆ ಅಂತವರಿಗೆ ಹಿಡಿದು ಕಠಿಣ ಶಿಕ್ಷೆ ನೀಡಬೇಕೆಂದು ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷರು ತಿಳಿಸಿದ್ದಾರೆ.
ವರದಿ: ಸುನೀಲ ಸಲಗರ

