ಸೇಡಂ:ತಾಲೂಕಿನ ಊಡಗಿ ಗ್ರಾಮದಿಂದ ಹಂಗನಹಳ್ಳಿ ಮತ್ತು ಮಳಖೇಡ ಸ್ಟೇಷನ್ ತಾಂಡಕ್ಕೆ ಹೋಗುವ ರಸ್ತೆಯು ಅತ್ಯಂತ ಕಳಪೆ ಮಟ್ಟದ ಡಾಂಬರೀಕರಣ ರಸ್ತೆಯಾಗಿದೆ.ಕೇವಲ 4 ದಿನದ ಹಿಂದಗಡೆ ಡಾಂಬರೀಕರಣ ಮಾಡಿದ ರಸ್ತೆ ಯಾವ ರೀತಿ ಕಳಪೆ ಮಟ್ಟವಾಗಿದೆ ಎಂಬುದು ಕಾಣಬಹುದು.ಈ ರಸ್ತೆಗೆ ಸುಮಾರು ಅಂದಾಜು ವೆಚ್ಚ 3.5 ಕೋಟಿ ರೂಪಾಯಿಗಳು ಶಂಕುಸ್ಥಾಪನೆ ಮಾಡಲಾಗಿದೆ
ಈ ರಸ್ತೆ ನಿರ್ಮಾಣ ಮಾಡುವಾಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಂಜಿಯರ್ ಗಳು ವೀಕ್ಷಣೆ ಮಾಡದೇ ಇರಬಹುದು ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ ಹಾಗೂ ಪರಿಶೀಲನೆ ಕೂಡ ಮಾಡದೆ ಇರಬಹುದು ಎಂಬ ಅನುಮಾನಗಳು ಕೂಡ ಉಂಟಾಗುತ್ತಿವೆ.
ಈ ರಸ್ತೆಯ ಗುತ್ತಿಗೆದಾರ ಯಾರೇ ಇದ್ದರೂ ಅವರ ಪರವಾನಿಗೆ ರದ್ದುಗೊಳಿಸಬೇಕು ಹಾಗೂ ಅವರ ಕಾಂಟಾಕ್ಟ್ ಲೈಸೆನ್ಸ್ ಬ್ಲಾಕ್ ಲಿಸ್ಟ್ ಗೆ ಹಾಕಬೇಕು ಮತ್ತು ಅವರ ಮೇಲೆ ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳಬೇಕು.ಮುಂದೆ ಇವರಿಗೆ ಯಾವುದೇ ಕೆಲಸವನ್ನು ಕೊಡಬಾರದು ಹಾಗೂ ಇವರ ಬಿಲ್ಲನ್ನು ತಡೆಹಿಡಿಯಬೇಕು ಕೂಡಲೇ ಈ ರಸ್ತೆಯನ್ನು ಗುಣಮಟ್ಟದ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಅಧಿಕಾರಿಗಳು ಗುತ್ತಿಗೆದಾರನಿಗೆ ಸೂಚಿಸಬೇಕು.
ಸಚಿವರಾದ ಡಾ. ಶರಣಾಪ್ರಕಾಶ ಪಾಟೀಲರ ತವರೂರಲ್ಲೇ ಈ ರೀತಿ ಕಳಪೆ ಮಟ್ಟದ ರಸ್ತೆಯ ಕಾಮಗಾರಿ ಆದರೆ ಬೇರೆ ಊರಿನ ಕಾಮಗಾರಿ ಗತಿಯೇನು.ಸಚಿವರು ಇನ್ನೂ ಮುಂದಾದರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಬೇಕು ಎಂದು ಬಿಜೆಪಿ ಎಸ್ ಸಿ ಮೋರ್ಚಾ ಮಾಜಿ ಉಪಾಧ್ಯಕ್ಷರಾದ ರಾಜು ಕಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್

