Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನೈತಿಕ ಸಂಬಂಧ ಬಯಲು ಮಾಡಿದ್ದಕ್ಕೆ ಕೊಲೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಜನ ಅರೆಸ್ಟ್ 

Advertisement
ಉತ್ತರ ಕನ್ನಡ : ಅನೈತಿಕ ಸಂಬಂಧ ಬಯಲು ಮಾಡಿದ್ದಕ್ಕೆ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ನೆಲೆಯಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅನೈತಿಕ ಸಂಬಂಧವನ್ನು ಮಹಿಳೆಯ ಮಗಳು ಬಯಲು ಮಾಡಿದ್ದಕ್ಕೆ ಓರ್ವನ ಕೊಲೆಯಾಗಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಗಂಭೀರವಾಗಿ ಗಾಯಗೊಂಡಂತಹ ವಸಂತ ನಾಯಕ್ ಎನ್ನುವ ವ್ಯಕ್ತಿ ಇದೀಗ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವಸಂತ ನಾಯಕ್ ಸಾವನ್ನಪ್ಪಿದ್ದಾರೆ. ತಾಯಿಯ ಅನೈತಿಕ ಸಂಬಂಧವನ್ನು ಮಗಳು ಬಯಲು ಮಾಡಿದ್ದಳು.

ಜ್ಯೋತಿಷಿ ಕಮಲಾಕರ ಭಟ್ ಜೊತೆ ಸುಚಿತ್ರ ಅನೈತಿಕ ಸಂಬಂಧ ಹೊಂದಿದ್ದಳು. ಮಗಳಿಗೆ ತಾಯಿ ಸುಚಿತ್ರ ಚಿತ್ರ ಹಿಂಸೆ ನೀಡುತ್ತಿದ್ದಳು. ಆಗ ಮಗಳಿಗೆ ತಂದೆ ಮಹೇಶ್ ನಾಯಕ್ ನೆರವಿಗೆ ನಿಲ್ಲುತ್ತಾರೆ.

ಸುಚಿತ್ರ ಪತಿ ಕುಮಾರ್ ಹಾಗೂ ವಸಂತ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಪೊಲೀಸ್ ಠಾಣೆಗೆ ದೂರು ಕೊಟ್ಟು ಮರಳಿದಾಗ ಗಂಭೀರವಾಗಿ ಹಲ್ಲೆ ನಡೆದಿದೆ. ಸುಚಿತ್ರ ತಂದೆ ಲೋಕನಾಥ, ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರ ಹಾಗೂ ಮತ್ತೊಬ್ಬ ವ್ಯಕ್ತಿಯಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವಸಂತ ನಾಯಕ್ ಇದೀಗ ಸಾವನಪ್ಪಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದವರಾಗಿದ್ದ ಮಹೇಶ್ ನಾಯಕ್ ಮತ್ತು ಸುಚಿತ್ರಾಗೆ ಇಬ್ಬರು ಜನ ಹೆಣ್ಣು ಮಕ್ಕಳು ಇದ್ದಾರೆ. ಕಳೆದ ಹಲವು ತಿಂಗಳ ಹಿಂದೆ ಮಹೇಶ್ ನಾಯಕ ಮತ್ತು ಸುಚಿತ್ರ ಮಧ್ಯ ಗಲಾಟೆ ಆಗಿ ಇಬ್ಬರೂ ಪ್ರತ್ಯೇಕವಾಗಿ ವಾಸ್ತುತಿದ್ದರು.

ಈ ವೇಳೆ ಶಿವಮೊಗ್ಗ ಮೂಲದ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರೊಂದಿಗೆ ಸುಚಿತ್ರ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರವನ್ನು ಮಗಳು ಮಹೇಶ್ ನಾಯಕ ಗೆ ತಿಳಿಸಿದ್ದಾಳೆ.

ಈ ವೇಳೆ ಮಗಳನ್ನು ಕರೆದುಕೊಂಡು ಮಹೇಶ್ ನಾಯಕ್ ಸಿದ್ದಾಪುರ ಠಾಣೆಗೆ ಕರೆದುಕೊಂಡು ಹೋಗಿ ಮಗಳಿಗೆ ತಾಯಿ ಕಿರುಕುಳ ಕೊಡುತ್ತಿದ್ದಾಳೆ ಎಂಬುದರ ಕುರಿತು ದೂರು ಕೊಡುತ್ತಾರೆ. ಆ ವೇಳೆ ಕಮಲಾಕರ್ ಭಟ್ ಸುಚಿತ್ರ ಮತ್ತು ಆಕೆಯ ತಂದೆಯ ಲೋಕನಾಥ್ ಇನ್ನೊಬ್ಬ ವ್ಯಕ್ತಿ ನಾಲ್ವರು ಸರಿ ಮಹೇಶ್ ನಾಯಕ್ ಮನೆಗೆ ಬಂದು ಹಲ್ಲೆ ಮಾಡುತ್ತಾರೆ.

ಈ ವೇಳೆ ಗಲಾಟೆಯಲ್ಲಿ ಮಹೇಶ್ ನಾಯಕ್ ಮತ್ತು ವಸಂತ ನಾಯಕ್ ಅವರ ಮೇಲೆ ಹಲ್ಲೆ ಮಾಡುತ್ತಾರೆ. ಗಲಾಟೆ ಬಿಡಿಸುವ ವೇಳೆ ವಸಂತ್ ನಾಯಕ ಗೆ ಚಾಕು ಇರಿಯಲಾಗುತ್ತದೆ. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ವಸಂತ ನಾಯಕ್ ಸಾವನ್ನಪ್ಪಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ