ಸ್ಯಾಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣನ ಲೈಫ್ ಇಲ್ಲಿಯ ತನಕ ಒಂದು ಲೆಕ್ಕ ಆದ್ರೆ ಇನ್ಮೇಲೆ ಹೊಸ ಲೆಕ್ಕ. ಯಾಕಂದ್ರೆ ಅವ್ರ ಲೈಫ್‌ಗೆ ವೈಫ್ ಬಂದಾಯ್ತು.
ಚಿಕ್ಕು ಜೀವನ ಪಾವನ ಆಗಿಸೋಕೆ ಪಾವನಾ ಗೌಡ ಎಂಟ್ರಿ ಕೊಟ್ಟಿದ್ದು, ಅರಮನೆ ನಗರಿ ಮೈಸೂರಲ್ಲಿ ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ಸಪ್ತಪದಿ ತುಳಿಯುತ್ತಿದ್ದಾರೆ.
ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಕಲ್ಯಾಣಕ್ಕೆ ಮೈಸೂರು ಸಜ್ಜು
ಸ್ಪೆಕ್ಟ್ರಾ ಸೆಂಟರ್‌ನಲ್ಲಿ ಸಿಂಗಾರ.. ಒಕ್ಕಲಿಗ ಸಂಪ್ರದಾಯದಂತೆ ಮದ್ವೆ
ರಿಸೆಪ್ಷನ್‌ಗೆ ಗಣ್ಯರ ದಂಡು.. ಹುಣಸೂರು ರಸ್ತೆ ಟ್ರಾಫಿಕ್ ಅಲರ್ಟ್
ಚಿಕ್ಕಣ್ಣ ಕಲ್ಯಾಣಕ್ಕೆ ಹೈಟೆಕ್ ಸೆಕ್ಯೂರಿಟಿ.. AI ಕ್ಯಾಮೆರಾ ಕಣ್ಗಾವಲು..!
ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ವಿಶಿಷ್ಟ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟ ಚಿಕ್ಕಣ್ಣ, ಇದೀಗ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿ ಸಪ್ತಪದಿ ತುಳಿಯಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಹಿರಿಯರು ನಿಶ್ಚಯಿಸಿರುವ ಈ ಶುಭ ವಿವಾಹದಲ್ಲಿ ಉದ್ಯಮಿ ಪಾವನಾ ಗೌಡ ಅವರ ಕೈಹಿಡಿಯುತ್ತಿರುವ ಚಿಕ್ಕಣ್ಣ, ಮೈಸೂರಿನ ಪ್ರಸಿದ್ಧ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್ ನಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ಈಗಾಗಲೇ ಮದುವೆ ಮುನ್ನ ನಡೆದ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.


