ಹುಬ್ಬಳ್ಳಿ: ಧೂಮಪಾನ ಮತ್ತು ಗುಟ್ಕಾ ಅಭ್ಯಾಸ ತ್ಯಜಿಸಿ ಎಂಬ 'ತಂಬಾಕು ರಹಿತ ದಿನ' ಶಿಬಿರವನ್ನು ನಗರದ ಹನ್ಸ್ ಹೊಟೇಲ್ ಬಳಿ ಇರುವ ಲೇಸರ್ ವೇದಾ ಡೆಂಟಲ್ ಇನ್ಸ್ಟಿಟ್ಯೂಟ್‌ನಲ್ಲಿ ಮೇ ೩೧ ಎಂದು ಆಯೋಜಿಸಲಾಗಿದೆ ರಂದು ಡಾ. ಚಂದ್ರಶೇಖರ ಯಾವಗಲ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಸುಧಾರಿತ ಲೇಸರ್ ತಂತ್ರಜ್ಞಾನದೊAದಿಗೆ ಬಾಯಿ ಕ್ಯಾನ್ಸರ್ ಪತ್ತೆ ಮತ್ತು ವ್ಯಸನ ನಿವಾರಣಾ ಚಿಕಿತ್ಸೆಗೆ ಲೇಸರ್ ಮೂಲಕ ಆಕ್ರಮಣಶೀಲ ಹಾಗೂ ನೋವು ರಹಿತವಲ್ಲದ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಮೇ ೩೧ ರಂದು ನಡೆಯಲಿರುವ ಶಿಬಿರವು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ನಂ. ೭೭೬೦೭೩೪೭೭೪ ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ವರದಿ:ಸುಧೀರ್ ಕುಲಕರ್ಣಿ

