ಢಾಕ್ಕಾ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ನಾಳೆ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡವನ್ನು ಎದುರಿಸಲಿದೆ.
ಶೇರೆ ಬಾಂಗ್ಲಾ ನ್ಯಾಷಿನಲ್ ಸ್ಟೇಡಿಯಂನಲ್ಲಿ ಪಂದ್ಯ ನಾಳೆ ಭಾರತೀಯ ಕಾಲಮಾನ ೯:೩೦ ಕ್ಕೆ ಆರಂಭವಾಗಲಿದೆ. ಆತಿಥೇಯ ಬಾಂಗ್ಲಾ ತಂಡದ ನೇತೃತ್ವವನ್ನು ನಜಮ್ ಉಲ್ ಹುಸೇನ್ ಶಾಂಟೋ ವಹಿಸುವರು. ಪಾಕಿಸ್ತಾನ ತಂಡದ ನಾಯಕತ್ವವನ್ನು ಶಾನ್ ಮಸೂದ್ ವಹಿಸಿಕೊಳ್ಳುತ್ತಿದ್ದಾರೆ.

