ರಾವಲಪಿಂಡಿ: ಎಂ. ಸದಾಖತ್ ಅವರ ಬಿರುಸಿನ ಬ್ಯಾಟಿಂಗ್ 96 (51 ಎಸೆತ, 6 ಬಾಂಡ್ರಿ, 7 ಸಿಕ್ಸರ್) ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ 2 ನೇ ಟಿ- 20 ಪಂದ್ಯವನ್ನು 82 ರನ್ ಗಳಿಂದ ಸುಲಭವಾಗಿ ಗೆದ್ದುಕೊಂಡಿತು.
ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಕಿಸ್ತಾನ ತಂಡವು ಇನ್ನು 1 ಪಂದ್ಯ ಬಾಕಿ ಇರುವಂತೆ 3 ಪಂದ್ಯಗಳ ಸರಣಿಯನ್ನು 2-0 ರಿಂದ ಗೆದ್ದುಕೊಂಡಿದೆ.
ಸ್ಕೊರ್ ವಿವರ
ಪಾಕಿಸ್ತಾನ 20 ಓವರ್ ಗಳಲ್ಲಿ 3 ವಿಕೆಟ್ ಗೆ 215
ಶ್ರೀಲಂಕಾ 20 ಓವರ್ ಗಳಲ್ಲಿ 7 ವಿಕೆಟ್ ಗೆ 133


