Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಧಾನ ಪರಿಷತ್ತಿನಲ್ಲಿ ಧನ ವಿನಿಯೋಗ ವಿಧೇಯಕ ಅಂಗೀಕಾರ

Advertisement
ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಉತ್ತರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸದನದಿಂದ ಸಭಾತ್ಯಾಗ ಮಾಡಿದ ಘಟನೆ ನಡೆದಿದೆ. ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ 'ಕರ್ನಾಟಕ ಧನ ವಿನಿಯೋಗ ವಿಧೇಯಕ'ಕ್ಕೆ ಅಂಗೀಕಾರ ಪಡೆಯಲಾಯಿತು.

ಮನುವಾದಿಗಳ ವಿರೋಧ ಎಂದ ಸಿಎಂ:

ಬಜೆಟ್ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಈ ಬಜೆಟ್‌ಗೆ ಮನುವಾದಿಗಳ ವಿರೋಧವಿದೆ" ಎಂದು ಹೇಳಿಕೆ ನೀಡಿದರು. ಸಿಎಂ ಅವರ ಈ ಹೇಳಿಕೆ ಬಿಜೆಪಿ ಸದಸ್ಯರನ್ನು ಕೆರಳಿಸಿತು.

ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ಈ ವೇಳೆ ಸದನದಿಂದ ಹೊರನಡೆಯುತ್ತಿದ್ದ ಬಿಜೆಪಿ ಸದಸ್ಯರನ್ನು ಕಂಡು ಕಾಂಗ್ರೆಸ್ ಸದಸ್ಯರು 'ಶೇಮ್ ಶೇಮ್' ಎಂದು ಕೂಗುವ ಮೂಲಕ ಲೇವಡಿ ಮಾಡಿದರು.

ಭೋಜೇಗೌಡರಿಗೆ ಸಿಎಂ ಟಾಂಗ್:

ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಕೂಡ ಎದ್ದು ಹೊರನಡೆಯಲು ಮುಂದಾದರು.

ಇದನ್ನು ಗಮನಿಸಿದ ಸಿದ್ದರಾಮಯ್ಯ ಅವರು, "ಹೇ ಭೋಜೇಗೌಡ, ನೀನು ಎಲ್ಲಿ ಹೋಗ್ತೀಯ? ಕುಳಿತುಕೋ ಇಲ್ಲಿ" ಎಂದು ಏಕವಚನದಲ್ಲೇ ಹಾಸ್ಯ ಮಿಶ್ರಿತವಾಗಿ ತಡೆದ ಪ್ರಸಂಗವೂ ನಡೆಯಿತು.

ಧನ ವಿನಿಯೋಗ ವಿಧೇಯಕ ಅಂಗೀಕಾರ:

ಬಿಜೆಪಿ ಸದಸ್ಯರು ಸದನದಿಂದ ಹೊರನಡೆದ ನಂತರ, ವಿಪಕ್ಷಗಳ ಅನುಪಸ್ಥಿತಿಯಲ್ಲೇ ವಿಧಾನ ಪರಿಷತ್ತಿನಲ್ಲಿ 'ಕರ್ನಾಟಕ ಧನ ವಿನಿಯೋಗ ವಿಧೇಯಕ'ವನ್ನು ಮಂಡಿಸಿ, ಅದಕ್ಕೆ ಅಂಗೀಕಾರ ಪಡೆಯಲಾಯಿತು. ಆಡಳಿತ ಪಕ್ಷದ ಸದಸ್ಯರ ಬೆಂಬಲದೊಂದಿಗೆ ವಿಧೇಯಕವು ಯಾವುದೇ ಅಡೆತಡೆಯಿಲ್ಲದೆ ಪಾಸಾಯಿತು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಸಭೆ - ವಿಧಾನಪರಿಷತ್‌ನ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ : ಕಣದಲ್ಲಿ 8 ಜನನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು : ಉಪ್ಪಿನಲ್ಲಿ ಮಲಗಿಸಿ ಖುರಾನ್ ಪಠಿಸಿದ ಪೋಷಕರು ಚೇಳೂರಿನಲ್ಲಿ ವಿಶೇಷ ಸ್ವಚ್ಛತಾ ಕಾರ್ಯ : ಪಿಡಿಒ ಕೆ. ವೆಂಕಟಾಚಲಪತಿ ನೇತೃತ್ವದಲ್ಲಿ ಕಸ ತೆರವುಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್