ಕೊಪ್ಪಳ: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ (Sting Operation) ಹಾಗೂ ಸಿಡಿ ವಿವಾದ ಇದೀಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ದಾಳಿಯ ಕಣವಾಗಿ ಮಾರ್ಪಟ್ಟಿದೆ. ಕೊಪ್ಪಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ಶ್ರೀರಾಮುಲು, (Sriramulu) ರಾಜ್ಯ ಸರ್ಕಾರ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಸಿದ್ದರಾಮಯ್ಯ (Siddaramaiah) ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ನಕಲಿ ಸಿಡಿ ಸೃಷ್ಟಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆಹಿಂದುಳಿದ ವರ್ಗದ ಪ್ರಭಾವಿ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೆ ಮಸಿ ಬಳಿಯಲು ಮತ್ತು ಅವರನ್ನು ಸ್ಥಾನದಿಂದ ಕೆಳಗಿಳಿಸಲು ಶಡ್ಯಂತ್ರ ರೂಪಿಸಲಾಗಿದೆ. "
ಯಾರೋ ಒಬ್ಬರಿಗೆ ಬುರ್ಖಾ ತೊಡಿಸಿ ಕೂರಿಸಿ, ನಕಲಿ ಹಾಗೂ ಬೋಗಸ್ ವಿಡಿಯೋ ತಯಾರಿಸಲಾಗಿದೆ. ಸಿದ್ದರಾಮಯ್ಯ ಅವರಿಗೆ ಆಗಿರುವ ಈ ಅಪಮಾನ ಬೇರೆ ಯಾವುದೇ ನಾಯಕನಿಗೂ ಆಗಬಾರದು. ಸಿಎಂ ಕಚೇರಿಯ ಪ್ರಭಾವ ಬಳಸಿ ಈ ಸಿಡಿ ಸಿದ್ಧಪಡಿಸಲಾಗಿದೆ," ಎಂದು ಶ್ರೀರಾಮುಲು ಆರೋಪಿಸಿದರು. ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ತಕ್ಷಣವೇ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಪಟ್ಟು ಹಿಡಿದರು.
ಪ್ರಿಯಾಂಕ್ ಖರ್ಗೆ ಕೇವಲ 'ಸೋಷಿಯಲ್ ಮೀಡಿಯಾ ಮಂತ್ರಿ'
ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಶ್ರೀರಾಮುಲು, "ಖರ್ಗೆ ಅವರು ಬೆಳಿಗ್ಗೆ ಎದ್ದ ತಕ್ಷಣ ಸೋಷಿಯಲ್ ಮೀಡಿಯಾ ನೋಡುವುದರಲ್ಲೇ ಕಾಲ ಕಳೆಯುತ್ತಾರೆ.
ತಮ್ಮ ಇಲಾಖೆಯ ಕೆಲಸವನ್ನು ನಿಭಾಯಿಸುವುದನ್ನು ಬಿಟ್ಟು, ತಮ್ಮ ವಿರುದ್ಧ ಮಾತನಾಡಿದವರ ಮೇಲೆ ಕೇಸ್ ಹಾಕಿಸುವುದೇ ಅವರ ಮುಖ್ಯ ಕೆಲಸವಾಗಿದೆ. ಅವರು ಕೇವಲ ಸೋಶಿಯಲ್ ಮೀಡಿಯಾ ಮಂತ್ರಿಯಾಗಿದ್ದಾರೆ" ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದರು.


