ಪಶ್ಚಿಮ ಏಷ್ಯಾ ಬಿಕ್ಕಟ್ಟು ಹಾಗೂ ತಾತ್ಕಾಲಿಕ ಕದನ ವಿರಾಮದ ವೇಳೆಯಲ್ಲೂ ಶಾಂತಿ, ಮಾತುಕತೆಗೆ ನಿರಂತರ ಅಡಚಣೆಗಳು ಬರುತ್ತಿವೆ.
ಇರಾನ್ ಮೇಲೆ ಬ್ಲಾö್ಯಕ್ ಮೇಲ್ ಮಾಡಿ ಹೆದರಿಸಿ, ಬೆದರಿಸುವ ತಂತ್ರ ನಡೆಯುವುದಿಲ್ಲ ಎಂದು ರಷ್ಯಾ ಹೇಳುವ ಮೂಲಕ ಪಶ್ಚಿಮ ಏಷ್ಯಾ ಬಿಕ್ಕಟ್ಟು ಬೇರೆ ಸ್ವರೂಪವನ್ನೇ ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗುತ್ತಿವೆ.
ಏತನ್ಮಧ್ಯೆ ರಷ್ಯಾದ ಅಧ್ಯಕ್ಷ ಪುಟಿನ್ ಅವರನು ಭೇಟಿ ಮಾಡಲು ಇರಾನ್ ವಿದೇಶಾಂಗ ಸಚಿವ ಅರ್ಘಾಚಿ ಅವರು ರಷ್ಯಾಗೆ ಬಂದಿಳಿದಿದ್ದು, ರಷ್ಯಾ ಅಧ್ಯಕ್ಷರನ್ನು ಭೇಟಿ ಮಾಡಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಂಬAಧಿಸಿದAತೆ ಮಾತುಕತೆ ನಡೆಸಲಿದ್ದಾರೆ.

