LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ತಿನ್ನೋ ಅನ್ನಕ್ಕೆ ಮಳೆರಾಯನ ಹೊಡೆತ : ಮತ್ತೊಮ್ಮೆ ಗಗನಕ್ಕೇರಿದ ಅಕ್ಕಿ ದರ

Advertisement

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಹಾಗೂ ನೀರಿನ ಅಭಾವದ ಪರಿಣಾಮ ಇದೀಗ ಜನಸಾಮಾನ್ಯರ ಅಡುಗೆ ಮನೆಗೆ ನೇರವಾಗಿ ತಟ್ಟಿದೆ. ಜಲಾಶಯಗಳಲ್ಲಿ ನೀರಿನ ಕೊರತೆಯಿಂದ ಭತ್ತದ ಇಳುವರಿ ಕುಸಿದಿರುವ ಬೆನ್ನಲ್ಲೇ, ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಅಕ್ಕಿ ದರ ಮತ್ತೊಮ್ಮೆ ಗಗನಕ್ಕೇರಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಈಗಾಗಲೇ ಎರಡು ಬಾರಿ ಬೆಲೆ ಏರಿಕೆಯಾಗಿದ್ದು, ಇಂದಿನಿಂದ (ಸೆಪ್ಟೆಂಬರ್ 15) ಮೂರನೇ ಬಾರಿಗೆ ಅಕ್ಕಿ ದರ ಪರಿಷ್ಕರಣೆಯಾಗಿರುವುದು ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಯಾವ ಅಕ್ಕಿಗೆ ಎಷ್ಟು ಬೆಲೆ ಏರಿಕೆ?

ನೂತನ ದರ ಪರಿಷ್ಕರಣೆಯ ಪ್ರಕಾರ, ಸಾಮಾನ್ಯ ಬಳಕೆಯ ಅಕ್ಕಿಯ ದರ ಪ್ರತಿ ಕೆಜಿಗೆ ₹5 ರಿಂದ ₹10 ರಷ್ಟು ಹೆಚ್ಚಳವಾಗಿದ್ದರೆ, ಪ್ರೀಮಿಯಂ ಹಾಗೂ ಉತ್ತಮ ಗುಣಮಟ್ಟದ ಅಕ್ಕಿಯ ಬೆಲೆ ಕೆಜಿಗೆ ₹10 ರಿಂದ ₹20 ರಷ್ಟು ಏರಿಕೆಯಾಗಿದೆ.

 ಕ್ವಿಂಟಾಲ್ ಲೆಕ್ಕದಲ್ಲಿ ಸಗಟು ಮಾರುಕಟ್ಟೆಯಲ್ಲಿ ಸುಮಾರು ₹1,000 ವರೆಗೆ ದರ ಹೆಚ್ಚಾಗಿದೆ. ಚೀಲಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ, ಸಾಮಾನ್ಯ ಅಕ್ಕಿಯ ಪ್ರತಿ ಬ್ಯಾಗ್‌ಗೆ ₹200 ಹಾಗೂ ಉತ್ತಮ ದರ್ಜೆಯ ಅಕ್ಕಿ ಚೀಲಕ್ಕೆ ₹250 ರಿಂದ ₹300 ರಷ್ಟು ಹೆಚ್ಚುವರಿ ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಜಾಪ್ರಭುತ್ವದ ಆಡಳಿತ, ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮದ ಮೌಲ್ಯವನ್ನು ನೆನಪಿಸುತ್ತದೆ : ತಹಶೀಲ್ದಾರ್ ಹೊಂಕಣದವರಹಿಟ್ & ರನ್ ಗೆ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಸಾವುಸತೀಶ್ ಜಾರಕಿಹೊಳಿಗೆ ಹೆಚ್ಚಿದ ಸಂಕಷ್ಟ : ಪ್ರಕರಣ ದಾಖಲಿಸಲು 'ED' ಸಿದ್ಧತೆ ಜಿಂಬಾಬೆ ವಿರುದ್ಧ ಕಾಂಗರೂಗಳಿಗೆ 59 ರನ್ ಗಳ ಗೆಲುವು ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ 119 ರನ್ ಗಳ ಸುಲಭ ಜಯಇನ್ನೊಂದು ಪಂದ್ಯ ಇರುವಂತೆಯೇ ಸರಣಿ ಗೆದ್ದ ಭಾರತ ದುಬೈನಲ್ಲಿ ಕಾಂತಾರ ಸಿನಿಮಾಗೆ 9 ಪ್ರಶಸ್ತಿ : ದೇವರಿಗೆ ಅರ್ಪಿಸುತ್ತೇನೆ ಎಂದ ರಿಷಬ್ ಶೆಟ್ಟಿ ನಟ ದರ್ಶನ್‌ಗೆ ಬಿಗ್ ಡೇ : ಇಂದು ಎರಡು ಪ್ರಮುಖ ಅರ್ಜಿಗಳ ವಿಚಾರಣೆ, ತೀರ್ಪುಶಿರಡಿಯಲ್ಲಿ ಭಕ್ತರಿಗೆ ಮೋಸದ ಜಾಲ : ಪೂಜಾ ಸಾಮಗ್ರಿ ಕಿಟ್‌ನಲ್ಲಿ ಪ್ಲಾಸ್ಟಿಕ್ ಬಾದಾಮಿ ಪತ್ತೆಹೊಟ್ಟೆನೋವು ತಾಳಲಾರದೆ ಯೋಧ ಆತ್ಮಹತ್ಯೆ