ರಾಯಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫೭ ನೇ ಪಂದ್ಯದಲ್ಲಿ ನಾಳೆ ಮುಖಾಮುಖಿಯಾಗಲಿವೆ.
ಶಹೀದ್ ವೀರ ನಾರಾಯಣ ಸಿಂಗ್ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಪಂದ್ಯ ನಾಳೆ ಸಾಯಂಕಾಲ ೭:೩೦ ಕ್ಕೆ
ಆರಂಭವಾಗಲಿದೆ. ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕೆಕೆಆರ್ ೮ ನೇ ಸ್ಥಾನದಲ್ಲಿದೆ.
ಆರ್‌ಸಿಬಿ ತನ್ನ ಸ್ಥಾನ ಗಟ್ಟಿಮಾಡಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ಕೆಕೆಆರ್ ನಾಳೆಯ ಪಂದ್ಯವನ್ನು ಗೆದ್ದು ತಾನೂ ಕೂಡ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕೆಂಬ ಇರಾದೆಯಿಂದ ಪಂದ್ಯ ಆಡಲಿದೆ.

