ದೆಹಲಿ: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಹೊಸ ದಾಖಲೆ ಬರೆಯಿತು. ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಇಲ್ಲಿ ನಡೆದ ಪಂದ್ಯದಲ್ಲಿ ೨೬೪ ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಐಪಿಎಲ್‌ನಲ್ಲಿ ಅತಿ ದೊಡ್ಡ ಮೊತ್ತ ಚೇಸ್ ಮಾಡಿದ ತಂಡ ಎಂಬ ಗೌರವಕ್ಕೆ ಪಾತ್ರವಾಯಿತು.
ಮೊದಲು ಬ್ಯಾಟ್ ಮಾಡಿದ್ದ ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೬೪ ರನ್‌ಗಳಿಸಿತ್ತು. ೨೬೫ ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ೧೮.೫ ಓವರುಗಳಲ್ಲಿ ೪ ವಿಕೆಟ್‌ಗೆ ೨೬೫ ರನ್‌ಗಳನ್ನು ಗಳಿಸಿ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಸುಲಭ ಗೆಲುವು ಪಡೆಯಿತು.
ಪಂದ್ಯದಲ್ಲಿ ೩೮.೫ ಓವರುಗಳಲ್ಲಿ ೫೨೯ ರನ್‌ಗಳು ಹರಿದು ಬಂದವು. ೩೩ ಸಿಕ್ಸರ್‌ಗಳು ಹಾಗೂ ೪೯ ಬೌಂಡರಿಗಳು ಸಿಡಿದವು.
ಸ್ಕೋರ್ ವಿವರ
ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೬೪
ಕೆ.ಎಲ್. ರಾಹುಲ್ ೧೫೨ (೬೭ ಎಸೆತ, ೧೬ ಬೌಂಡರಿ, ೯ ಸಿಕ್ಸರ್)
ನಿತೀಶ್ ರಾಣಾ ೯೧ (೪೪ ಎಸೆತ, ೧೧ ಬೌಂಡರಿ, ೪ ಸಿಕ್ಸರ್)
ಪಂಜಾಬ್ ಕಿಂಗ್ಸ್ ೧೮.೫ ಓವರುಗಳಲ್ಲಿ ೪ ವಿಕೆಟ್‌ಗೆ ೨೬೫
ಪ್ರಬ್‌ಸಿಮರನ್ ಸಿಂಗ್ ೭೬ (೨೬ ಎಸೆತ, ೯ ಬೌಂಡರಿ, ೫ ಸಿಕ್ಸರ್)
ಶ್ರೇಯಸ್ ಅಯ್ಯರ್ (ಅಜೇಯ) ೭೧ (೩೬ ಎಸೆತ, ೩ ಬೌಂಡರಿ, ೭ ಸಿಕ್ಸರ್)
ಪ್ರಿಯಾಂಶ್ ಆರ್ಯ ೪೩ (೧೭ ಎಸೆತ, ೨ ಬೌಂಡರಿ, ೫ ಸಿಕ್ಸರ್)

