ಕೋಲ್ಕತ್ತಾ: ಚುನಾವಣೆ ಆಯೋಗದ ಆದೇಶದಂತೆ ಪಶ್ಚಿಮ ಬಂಗಾಳದ ಮಾರ್ಗಟ್ ಪಶ್ಚಿಮ ಭಾಗದ ೧೫ ಮತಗಟ್ಟೆಗಳಲ್ಲಿ ಇಂದು ಮರು ಮತದಾನ ಆರಂಭವಾಗಿದ್ದು, ಮತದಾರರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ಎರಡನೇ ಹಾಗೂ ಕಡೆಯ ಹಂತದ ಮತದಾನ ನಡೆದಾಗ ಈ ಭಾಗಗಳಲ್ಲಿ ವ್ಯಾಪಕ ಗೊಂದಲ ಕಂಡು ಬಂದ ಹಿನ್ನಲೆಯಲ್ಲಿ ಚುನಾವಣೆ ಆಯೋಗವು ಮರು ಮತದಾನಕ್ಕೆ ಆದೇಶ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಎರಡೂ ಹಂತದ ಮತದಾನಗಳಲ್ಲಿ ಈ ಸಲ ಭಾರಿ ಪ್ರಮಾಣದಲ್ಲಿ ಜನರು ಹೊರ ಬಂದು ತಮ್ಮ ಹಕ್ಕು ಚಲಾಯಿಸಿದ್ದರು. ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿತ್ತು. ಫಲಿತಾಂಶ ಮೇ. ೪ ಕ್ಕೆ ನಡೆಯಲಿದೆ.

