LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಸಿಡಿ ತೋರಿಸಿ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆಯಲಾಗಿದೆ: ಯತ್ನಾಳ್ 

Advertisement

ವಿಜಯಪುರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda patil yatnal) ಸ್ಟಿಂಗ್ ಆಪರೇಷನ್ (Sting operation) ವಿವಾದದ ನಡುವೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಹುದ್ದೆಯಿಂದ ಇಳಿಸುವ ಹಿಂದಿನ ದಿನ ಮಧ್ಯರಾತ್ರಿಯವರೆಗೂ ರಾಹುಲ್ ಗಾಂಧಿ ಅವರು ಸಭೆ ನಡೆಸಿ ಅಹಿಂದ ನಾಯಕ ಎಂದು ಶ್ಲಾಘಿಸಿದ್ದರು.

ಆದರೆ ನಂತರ ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸಿಡಿ ತೋರಿಸಿ ರಾಜೀನಾಮೆಗೆ ಒತ್ತಾಯಿಸಿದರು ಎಂದು ಯತ್ನಾಳ್ ಆರೋಪಿಸಿದ್ದಾರೆ. ಇಂತಹ ಕೃತ್ಯ ಮಾಡಿದವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರನ್ನು ಕೆಳಗಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ನು ಸತೀಶ್ ಜಾರಕಿಹೊಳಿ ಅವರನ್ನೂ ಅದೇ ಗುಂಪು ಬಲೆಗೆ ಕೆಡವಿದೆ ಎಂದು ಹೇಳಿರುವ ಯತ್ನಾಳ್, ಸ್ಟಿಂಗ್ ಬಗ್ಗೆ ಎಚ್ಚರಿಕೆ ನೀಡುವ ಮುಖ್ಯಮಂತ್ರಿಗಳಿಗೆ ಆ ಕಾರ್ಯಾಚರಣೆ ಬಗ್ಗೆ ಮೊದಲೇ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಬಳಿ ಈ ಸಂಬಂಧ ಸಂಪೂರ್ಣ ಮಾಹಿತಿ ಇದೆ, ಅವರು ಯಾವ ಹೋಟೆಲ್ ನಲ್ಲಿ ತಂಗಿದ್ದರು, ಎಲ್ಲಿ ಊಟ ಮಾಡಿದರು, ಎಷ್ಟು ಹಣ ನೀಡಿದರು ಎಂಬ ಎಲ್ಲಾ ವಿವರಗಳನ್ನು ಬಹಿರಂಗವಾಗಿ ದೊಡ್ಡ ಪರದೆಯ ಮೇಲೆ ಜನರ ಮುಂದೆ ಇಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐದು ವರ್ಷ ಪ್ರೀತಿ, ಮತ್ತೊಬ್ಬನ ಜೊತೆ ಮದುವೆ ನಿಶ್ಚಯ : ಪ್ರೇಯಸಿಯನ್ನ ಕೊಂದ ಪ್ರೇಮಿ ನಂದಿಹಾಳ ಹಳ್ಳಕ್ಕೆ ನೀರು ಹರಿಸುವಂತೆ ಗ್ರಾಮಸ್ಥರಿಂದ ತಹಶೀಲ್ದಾರ್ ರವರಿಗೆ ಮನವಿಬಾಂಗ್ಲಾದೇಶ- ಆಪಘಾನಿಸ್ತಾನ್ ಟೆಸ್ಟ್ ಡ್ರಾ ದಲ್ಲಿ ಅಂತ್ಯ ಕೇಂದ್ರ ಸಚಿವ ಸ್ಥಾನಕ್ಕೆ ಎಲ್. ಮುರುಗನ್ ರಾಜೀನಾಮೆ ಘೋಷಣೆಸಿಡಿ ತೋರಿಸಿ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆಯಲಾಗಿದೆ: ಯತ್ನಾಳ್ ಸ್ಟಿಂಗ್ ಆಪರೇಷನ್ ವಿಡಿಯೋಗೂ ನನಗೂ ಸಂಬಂಧವಿಲ್ಲ : ಸಿದ್ದರಾಮಯ್ಯ ಸೋಲಿನಿಂದ ಪಾರಾಗಲು ಕರ್ನಾಟಕ ಹೋರಾಟ ಚಿತ್ರದುರ್ಗದ ಉಕ್ಕಿನ ಕೋಟೆ ರಕ್ಷಿಸಿದ ವೀರ ಮದಕರಿ ನಾಯಕ: ಶಿವರಾಜ ಸಾಹುಕಾರವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ : ಬರೋಬ್ಬರಿ 1.31 ಕೋಟಿ ರೂಪಾಯಿ ವಂಚನೆಬೆಳಗಾವಿ, ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರ ಕಿಚ್ಚು : ಹೆದ್ದಾರಿ ಬಂದ್ ಮಾಡಿ ಆಕ್ರೋಶ