ವಿಜಯವಾಡ: ಕರ್ನಾಟಕ ಕ್ರಿಕೆಟ್ ತಂಡವು ಆಂದ್ರ ಪ್ರದೇಶ್ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲೈಟ್ ಬಿ, ಗುಂಪಿನ ಮೊದಲ ಪಂದ್ಯದಲ್ಲಿ ಸೋಲಿನಿಂದ ಪಾರಾಗಲು ಹೋರಾಟ ನಡೆಸಿದೆ.
ಕರ್ನಾಟಕ ತಂಡವು 3 ನೇ ದಿನದ ಆಟ ಮುಗಿದಾಗ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 176 ರನ್ ಗಳಿಸಿದ್ದು, 32 ರನ್ ಗಳ ಮುನ್ನಡೆಯನ್ನು ಮಾತ್ರ ಪಡೆದಿದೆ. ಅನುಭವಿ ಬ್ಯಾಟ್ಸ ಮನ್ ಕರುಣ್ ನಯ್ಯರ್ 81 ಹಾಗೂ ನಾಯಕ ಸಮರನ್ ರವಿಚಂದ್ರನ್ 21 ಬ್ಯಾಟ್ ಮಾಡುತ್ತಿದ್ದರು.
ಸ್ಕೊರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 274 ಹಾಗೂ 4 ವಿಕೆಟ್ ಗೆ 176
ಆಂದ್ರ ಪ್ರದೇಶ್ ಮೊದಲ ಇನ್ನಿಂಗ್ಸ್ 418


