ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್, ಆಲ್‌ರೌಂಡರ್ ಸಾಯಿರಾಜ ಬಹುತಲೇ ಅವರನ್ನು ಭಾರತ (ಸೀನಿಯರ್) ಕ್ರಿಕೆಟ್ ತಂಡದ ಸ್ಪಿನ್ನ ಬೌಲಿಂಗ್ ಕೋಚ್ ಎಂದು ನೇಮಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
ಸಾಯಿರಾಜ್ ಬಹುತಲೇ ರಣಜಿ ಟ್ರೋಫಿ ಮಟ್ಟದಲ್ಲಿ ಹಾಗೂ ಪ್ರಾಂಚೇಸಿ ಮಟ್ಟದಲ್ಲಿ ದೇಶಾದ್ಯಂತ ಸ್ಪಿನ್ನ ಬೌಲಿಂಗ್ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿರುವುದನ್ನು ಗಮನಿಸಿ ಈ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಂಬೈ ರಣಜಿ ತಂಡದ ಪರವಾಗಿ ಲೆಗ್ ಸ್ಪಿನ್ನರ್, ಆಲರೌಂಡರ್ ಆಗಿ ಸುಮಾರು ಎರಡು ದಶಕಗಳ ಕಾಲ ಆಡಿದ್ದ ಬಹುತಲೇ ೧೮೮ ಪಂದ್ಯಗಳಲ್ಲಿ ೬೩೦ ವಿಕೆಟ್ ಪಡೆದಿದ್ದರು. ಬ್ಯಾಟಿಂಗ್‌ನಲ್ಲಿಯೂ ತಮ್ಮ ಚಾಕಚಕ್ಯತೆ ತೋರಿದ್ದ ಬಲಗೈ ಲೆಗ್‌ಸ್ಪಿನ್ನರ್ ಆಲ್‌ರೌಂಡರ್ ೬೧೭೬ ರನ್ ಗಳಿಸಿದ್ದರು.
ಸಾಯಿರಾಜ್ ಬಹುತಲೇ ಭಾರತದ ಪರವಾಗಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಹಾಗೂ ಎಂಟು ಏಕದಿನ ಪಂದ್ಯಗಳಲ್ಲಿ ಆಡಿದ್ದರು.

