ಹುಬ್ಬಳ್ಳಿ : ಕನ್ನಡದ ಬಹುನಿರೀಕ್ಷಿತ 'ಅಯೋಗ್ಯ-೨' ಚಲನಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ ಹಾಗೂ ವರ್ಣರಂಜಿತ ಮೆರವಣಿಗೆ ಜು.೧೯ರಂದು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ನಡೆಯಲಿದೆ ಎಂದು ಸಿಬಿಎಫ್‌ಸಿ ಮಾಜಿ ನಿರ್ದೇಶಕ ಶಿವಾನಂದ ಮುತ್ತಣ್ಣವರ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ನಟಿ ರಚಿತಾ ರಾಮ್ ಹಾಗೂ ನಟ ನೀನಾಸಂ ಸತೀಶ ಅಭಿನಯದ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅದರ ಅಂಗವಾಗಿ ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಅAದು ಮಧ್ಯಾಹ್ನ ೨ ಗಂಟೆಗೆ ದೇಶಪಾಂಡೆನಗರ ಸರ್ಕಲ್‌ನ ಶಾರದಾ ಹೋಟೆಲ್ ಮುಂಭಾಗದಿAದ ರಚಿತಾ ರಾಮ್ ಹಾಗೂ ನೀನಾಸಂ ಸತೀಶ ಅವರನ್ನು ಉತ್ತರ ಕರ್ನಾಟಕದ ಜಾನಪದ ಕಲಾ ತಂಡಗಳೊAದಿಗೆ ಮೆರವಣಿಗೆ ಮೂಲಕ ಸವಾಯಿ ಗಂಧರ್ವ ಹಾಲ್‌ಗೆ ಕರೆತರಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಜೆ ನಡೆಯುವ ಧ್ವನಿಸುರಳಿ ಬಿಡುಗಡೆ ಸಮಾರಂಭವನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ ಎಂ. ಮುನೇಗೌಡ, ನಿರ್ದೇಶಕ ಎಸ್. ಮಹೇಶಕುಮಾರ, ನಟರಾದ ರವಿ ಶಂಕರ್, ಗಿರಿ ಶಿವಣ್ಣ, ಎ.ಆರ್. ಪೇಟೆ ಶಿವರಾಜ ಸೇರಿದಂತೆ ಚಿತ್ರತಂಡದ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ರಾಜ್ಯ ಐದು ವಿಮಾನ ನಿಲ್ದಾಣಗಳ ನಾಮಕರಣ ಸಮಿತಿಯ ಯುವ ಅಧ್ಯಕ್ಷ ಶ್ರೀಗಂಧ ಶೆಟ್ಟಿ, ಅನೀಲಕುಮಾರ ಪಾಟೀಲ, ಚಂದ್ರಶೇಖರ ಜುಟ್ಟಲ್, ಅಡಿವೆಪ್ಪ ಶಿವಳ್ಳಿ, ಸಮಾಜಸೇವಕಿ ವಿದ್ಯಾ ಶೆಟ್ಟಿ, ಮಲ್ಲಿಕಾರ್ಜುನ ಕುನ್ನೂರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ನಿಮಿತ್ತ ಖ್ಯಾತ ಸಂಗೀತಗಾರ ಗುರು ಚಲವಾದಿ ತಂಡದಿAದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಮುತ್ತಣ್ಣವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದ್ಯಾಮಣ್ಣ ಡೋಂಗಿ, ಡಾ. ಗುರು ಚಲವಾದಿ, ಮಲ್ಲಿಕಾರ್ಜುನ ತಾಲೂರ, ಚಂದ್ರಶೇಖರ ಹೊಸಳ್ಳಿ, ರಾಜು ಜೋಸೆಫ್ , ಆನಂದ ಡೋಂಗಿ ಪಾಲ್ಗೊಂಡಿದ್ದರು.
ವರದಿ : ಸುಧೀರ್ ಕುಲಕರ್ಣಿ


