ಗೋಕಾಕ : ಜಿಲ್ಲಾ ಆಡಳಿತ ಬೆಳಗಾವಿ ಮತ್ತು ಜಲ್ಲಾ ಪಂಚಾಯತ ಬೆಳಗಾವಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ , ಬೆಳಗಾವಿ .ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ .ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗೋಕಾಕ ತಾಲೂಕಿನ ಗೊಡಚಿನಮಲ್ಕಿಯಲ್ಲಿ ಅಂದಾಜು 17.42 ಕೋಟಿ, ರೂ ವೆಚ್ಚದಲ್ಲಿ ಡಾ. ಬಿ,ಆರ್,ಅಂಬೇಡ್ಕರ್ ವಸತಿ ಶಾಲೆ ಗೊಡಚಿನಮಲ್ಕಿ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೋಳಿ ಭೂಮಿ ಪೂಜೆ ನೇರವರಿಸಿದರು.
ಗೊಡಚಿನಮಲ್ಕಿ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಿಸಲು ಹಲವು ದಿನಗಳ ಬೇಡಿಕೆಯನ್ನ ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಇವರು ಇವತ್ತು ನೇರವೆರಿಸಿದ್ದಾರೆ.
ಭೂಮಿ ಪೂಜೆ ನೆರವೆರಿಸಿದ ನಂತರ ಸ್ಥಳಿಯ ಮುಖಂಡರಾದ ಡಾ: ಬಸವರಾಜ ಕೊಣ್ಣೂರ ಇವರು ಶಾಸಕರ ಹತ್ತಿರ ಗೊಡಚಿನಮಲ್ಕಿಯಲ್ಲಿ ವಸತಿ ಶಾಲೆ ಒಂದನ್ನು ನಿರ್ಮಿಸಲು ಮನವಿ ಮಾಡಲು ಹೋದಾಗ ಶಿಕ್ಷಣಕ್ಕೆ ತಾವೆಲ್ಲರೂ ಮಹತ್ವ ನೀಡುತಿದ್ದರಿ ಅದಕ್ಕೆ ಗೊಡಚಿನಮಲ್ಕಿ ಗ್ರಾಮದಲ್ಲಿ ಡಾ: ಬಿ,ಆರ್,ಅಂಬೇಡ್ಕರ್ ವಸತಿ ನಿರ್ಮಾಣ ಮಾಡಿಕೊಟ್ಟು ನಮ್ಮ ಬಹು ದಿನಗಳ ಬೇಡಿಕೆಯನ್ನು ಈಡೆರಿಸಿದ್ದಾರೆಂದು ಹೇಳಿ ಗ್ರಾಮಸ್ಥರ ಪರವಾಗಿ ಶಾಸಕರಿಗೆ ದನ್ಯವಾದ ತಿಳಿಸಿದರು.

ನಂತರ ಸಮಾಜ ಕಲ್ಯಾಣ ಅಧಿಕಾರಿಗಳಾದ ಅಶೋಕ ಮಲಬನ್ನವರ ಇವರು ಮಾತನಾಡಿ ಕಟ್ಟ ಕಡೆಯ ಮಕ್ಕಳು ಕೂಡ ಶಿಕ್ಷಣವಂತರಾಗಬೇಕು, ಗೋಕಾಕ ತಾಲೂಕಿನಿಂದ ಶಿಕ್ಷಣ ಕಲಿತು ಅಧಿಕಾರಿಗಳಾಗಿ ಹೊರಹೊಮ್ಮಬೇಕು,ಶಿಕ್ಷಣದಲ್ಲಿ ಕ್ರಾಂತಿ ಆಗಬೇಕು ಒಂದು ಕನಸನ್ನು ಕಟ್ಟಿಕೊಂಡು ಶಾಸಕ ರಮೇಶ ಜಾರಕಿಹೋಳಿಯವರು ಅಬಿವೃದ್ದಿ ಕಾರ್ಯ ಮಾಡುತಿದ್ದಾರೆ ಅದಕ್ಕಾಗಿ ಎಲ್ಲರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಬೀಮಗೌಡ್ರ ಪೋಲಿಸ್ ಪಾಟೀಲ, ಡಾ.ಬಸವರಾಜ ಸಿದ್ದಪ್ಪ ಕೊಣ್ಣೂರ, ಮಲ್ಲಪ್ಪ ಸತ್ತೆಪ್ಪ ರವರಂಗಿ,ಬಸವಣ್ಣಿ ಜರಳಿ, ಯಲ್ಲಪ್ಪ ಕಳ್ಳಿಬದಿ, ಬಾಳಪ್ಪ ನಾಯಕ, ಸಿದ್ದಪ್ಪ ಮಾನಗಾಂವಿ, ಬಾಬಾಜಾನ ದೆಸಾಯಿ ವಸತಿ ಶಾಲೆ ಜಿಲ್ಲಾ ಸಮನ್ವಯ ಅಧಿಕಾರಿ ರಾಘವೆಂದ್ರ ಗಂಗರೆಡ್ಡಿ, ಪ್ರಾಂಶುಪಾಲರಾದ ಎಸ್,ಎಸ್,ಬಸ್ಸಾಪುರಿ, ನಿಲಯ ಪಾಲಕರರಾದ ಸಣಸಿದ್ದಪ್ಪ ಖಡಕಬಾವಿ, ಸಮಾಜ ಕಲ್ಯಾಣ ಅದಿಕಾರಿ ಮಲಬನ್ನವರ,ತಾಲೂಕಾ ಅಧಿಕಾರಿ ಶಿವಲಿಂಗ ಆಸಂಗಿ ,ಜಯಶ್ರಿ ಗೊಟೂರ, ಪಿಡಿಓ ಎಸ್,ಎಸ್, ಜಮಖಂಡಿ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಮನೋಹರ ಮೇಗೇರಿ


