Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗುರುಮಠಕಲ್‌ನಲ್ಲಿ ಕುರಿ ಸಂತೆ ಆರಂಭಿಸಿ; ರಸ್ತೆ ಬದಿಯ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕಿ

ರೈತರ ಅನುಕೂಲಕ್ಕಾಗಿ ಕೃಷಿ ಮಾರುಕಟ್ಟೆಯಲ್ಲಿ ಕುರಿ ಸಂತೆ ಆರಂಭಿಸುವಂತೆ ಆಗ್ರಹ – ಬಸ್ ನಿಲ್ದಾಣ ಸುತ್ತಮುತ್ತ ತರಕಾರಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಉಮೇಶ್ ಕೆ. ಮುದ್ನಾಳ್ ಒತ್ತಾಯ

Advertisement

ಗುರುಮಠಕಲ್: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಅವರು ತಾಲೂಕಿನ ಕೃಷಿ ಮಾರುಕಟ್ಟೆಯಲ್ಲಿ ಎತ್ತಿನ ಸಂತೆಯ ಜೊತೆಗೆ ಕುರಿ ಸಂತೆಯನ್ನೂ ಆರಂಭಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಮಠಕಲ್ ಹಾಗೂ ಸುತ್ತಮುತ್ತಲಿನ ರೈತರು ಮತ್ತು ಕುರಿ ಸಾಕಾಣಿಕೆದಾರರು ಕುರಿಗಳನ್ನು ಖರೀದಿಸಲು ಸುಮಾರು 50 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಗುರುಮಠಕಲ್‌ನಲ್ಲಿ ಪ್ರತಿ ಸೋಮವಾರ ನಡೆಯುವ ಎತ್ತಿನ ಸಂತೆಯ ಜೊತೆಗೆ ಕುರಿ ಸಂತೆಯನ್ನೂ ಆರಂಭಿಸಿದರೆ ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಅಲ್ಲದೆ, ದನ-ಕರುಗಳ ಸಂತೆಗೆ ಅಗತ್ಯವಾದ ಕುಡಿಯುವ ನೀರು, ನೆರಳು, ವಿಶ್ರಾಂತಿ ಸ್ಥಳ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.
"ದೇಶವನ್ನು ಸೈನಿಕರು ಕಾಪಾಡಿದರೆ, ದೇಶದ ಜನತೆಗೆ ಅನ್ನ ನೀಡುವವರು ರೈತರು. ರೈತರು ದೇಶದ ಬೆನ್ನೆಲುಬಾಗಿದ್ದು, ಅವರಿಗೆ ಸರ್ಕಾರ ಮತ್ತು ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು" ಎಂದು ಉಮೇಶ್ ಕೆ. ಮುದ್ನಾಳ್ ಹೇಳಿದರು.

ವರದಿ : ರವಿ ಬುರನೋಳ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುರುಮಠಕಲ್‌ನಲ್ಲಿ ಕುರಿ ಸಂತೆ ಆರಂಭಿಸಿ; ರಸ್ತೆ ಬದಿಯ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕಿಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶೈಲಜಾ ಶ್ರೀಶೈಲನ್ ಇನ್ನಿಲ್ಲ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ : ಐವರು ಶಂಕಿತ ಉಗ್ರರು ಅರೆಸ್ಟ್19ಕ್ಕೆ 'ಅಯೋಗ್ಯ -2 ಚಿತ್ರದ ಧ್ವನಿಸುರಳಿ ಬಿಡುಗಡೆ ಪುಣೆ ಮಾದರಿಯಲ್ಲಿಯೇ ಮತ್ತೊಂದು ಹತ್ಯೆ : ಮಗುವಿನ ಎದುರೇ ಗಂಡನ ಬರ್ಬರ ಹತ್ಯೆಗೈದ ಹೆಂಡತಿ, ಪ್ರಿಯಕರ ಚಾಮುಂಡಿ ದೇವಿಗೆ ಹರಕೆ ಸೀರೆ ತೀರಿಸಿದ್ದ ಡಿ.ಕೆ.ಶಿವಕುಮಾರ್ ಪತ್ನಿ ವಿದ್ಯುತ್,ಡಿಸೇಲ್ ಇಲ್ಲದ ದೇಶದ ಹೈಡ್ರೋಜನ್ ರೈಲಿಗೆ ಮೋದಿ ಚಾಲನೆ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ಸಿಗುವಂತಾಗಬೇಕು :ಅಶೋಕ  ಮಲಬನ್ನವರ15 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ : ಎರಡನೇ ಬಾರಿಗೆ ಗರ್ಭಿಣಿಯಾದ ಬಾಲಕಿಪ್ರೀತಿಸಿ ಮದುವೆಯಾಗಿದ್ದ ಕೆಲವೇ ಕ್ಷಣಗಳಲ್ಲಿ ನವವಿವಾಹಿತನ್ನ ಬರ್ಬರ ಹತ್ಯೆ