ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ (47) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿಯ ದಿಲೀಪ್ ರಾಜ್ ನಿಧನರಾಗಿದ್ದಾರೆ.ಮನೆಯಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನರಾಗಿದ್ದಾರೆ.
ದಿಲೀಪ್ ರಾಜ್ ಅವರು ಕೇವಲ ನಟರಾಗಿ ಮಾತ್ರವಲ್ಲದೆ, ಕಂಠದಾನ ಕಲಾವಿದರಾಗಿ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. 2007ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಮಿಲನ' ಚಿತ್ರದಲ್ಲಿ ಹೇಮಂತ್ ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ನಂತರ 'ಯು ಟರ್ನ್', 'ಲವ್ ಗುರು', 'ಗಾನಾ ಬಜಾನಾ', ಮತ್ತು 'ಆರ್ಕೆಸ್ಟ್ರಾ ಮೈಸೂರು' ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದರು.
ಕಿರುತೆರೆ ಪಯಣ: 'ಜನನಿ', 'ರಂಗೋಲಿ', 'ರಥಸಪ್ತಮಿ'ಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಇತ್ತೀಚೆಗೆ ಜೀ ಕನ್ನಡದ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ 'ಎ.ಜೆ' (ಅಭಿರಾಮ್ ಜಯಶಂಕರ್) ಪಾತ್ರದ ಮೂಲಕ ಮನೆಮಾತಾಗಿದ್ದರು.

