Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ 'ಎಸ್ ಸರ್' ಬದಲು ಜೈ ಶ್ರೀರಾಮ್ ಹೇಳಿ : ಶಾಸಕ ಯತ್ನಾಳ್

Advertisement

ವಿಜಯಪುರ: ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ.ಇನ್ಮುಂದೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ 'ಎಸ್ ಸರ್' ಎನ್ನುವ ಬದಲು ಜೈ ಶ್ರೀರಾಮ್ ಅಂತ ಹೇಳಿ. ಶಿಕ್ಷಕರಿಗೆ ನಮಸ್ಕರಿಸುವಾಗ ಜೈ ಶ್ರೀರಾಮ್ ಎನ್ನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ ಕೊಟ್ಟಿದ್ದಾರೆ.

 

ಶಿಕ್ಷಣ ಸಂಸ್ಥೆಗಳಲ್ಲಿ ಪುನಃ ಹಿಜಬ್ ಧರಿಸಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಅವರು ಹರಿಹಾಯ್ದಿದ್ದಾರೆ. ಕೇಸರಿ ಶಾಲು ಧರಿಸುವುದಕ್ಕೆ ನಿಷೇಧ ಹೇರಲು ಕಾಂಗ್ರೆಸ್ಸಿನವರಿಗೆ ಅಧಿಕಾರ ಕೊಟ್ಟವರು ಯಾರು? ಕೇಸರಿ ಶಾಲು ಹಾಕಲು ನಮಗೆ ಹಕ್ಕಿದೆ.

 

ರಾಜ್ಯದ ಎಲ್ಲಾ ಹಿಂದೂಗಳಿಗೆ ಕರೆ ಕೊಡುತ್ತಿದ್ದೇನೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತಿಲಕ ಇಟ್ಟು ಕೇಸರಿ ಶಾಲು ಹಾಕಿ ಶಾಲೆಗೆ ಕಳುಹಿಸಿ. ಇವರು ಹೇಗೆ ವಿರೋಧ ಮಾಡುತ್ತಾರೆ? ಹೇಗೆ ತಡೆಯುತ್ತಾರೆ? ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿರುವ ಶೇ.30 ರಷ್ಟು ತೆರಿಗೆಯನ್ನು ಶೇ. 20ಕ್ಕೆ ಇಳಿಸಲಿ. ಮೊನ್ನೆ ಇವರು ಕರೆಂಟ್ ಬಿಲ್ ಹೆಚ್ಚಳ ಮಾಡಿದ್ದಾರೆ ತಾನೇ? ಮರಣ ಪ್ರಮಾಣಪತ್ರದ ಸ್ಟಾಂಪ್ ಡ್ಯೂಟಿಯನ್ನು ನೀವು ಯಾಕೆ ಏರಿಕೆ ಮಾಡಿದ್ದೀರಿ. ರಾಜ್ಯದಲ್ಲಿ ನೀವು ಯಾವುದು ಕಡಿಮೆ ಮಾಡಿದ್ದೀರಿ ಹೇಳಿ? ಹಾಗಾಗಿ, ಕಾಂಗ್ರೆಸಿನವರಿಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ವೈಯಕ್ತಿಕವಾಗಿ ವಾಹನ ಬಳಕೆ ಕಡಿಮೆ ಮಾಡಿಕೊಳ್ಳುತ್ತೇನೆ. ನೂರಕ್ಕೆ ನೂರರಷ್ಟು ಮಾಡಿಕೊಳ್ಳುವುದಿಲ್ಲ. ಸುಮ್ಮನೇ ವಿಜಯೇಂದ್ರನಂತೆ ನಾಟಕ ಮಾಡುವುದಿಲ್ಲ. ಎಲ್ಲಿಯವರೆಗೆ ಪ್ರಧಾನ ಮಂತ್ರಿಗಳು ಬಂಗಾರ ತೆಗೆದುಕೊಳ್ಳಬೇಡಿ ಅಂತ ಹೇಳುತ್ತಾರೆಯೋ? ಅಲ್ಲಿಯವರೆಗೆ ಒಂದು ಗುಂಜಿ ಬಂಗಾರ ಕೂಡ ಖರೀದಿಸುವುದಿಲ್ಲ ಎಂದು ಮೋದಿಯವರ ಮಿತವ್ಯಯ ಕರೆಗೆ ಸಹಮತ ವ್ಯಕ್ತಪಡಿಸಿದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST