Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧರ್ಮಸ್ಥಳ ಯಾತ್ರೆಗೆ ಬಿಜೆಪಿಗೆ ವಿದೇಶದಿಂದ ಹಣ ಬಂದಿದೆ: ಸಿದ್ದರಾಮಯ್ಯ ಆರೋಪ 

Advertisement
ಮೈಸೂರು : ಬಿಜೆಪಿ ನಾಯಕರಿಂದ ಧರ್ಮಸ್ಥಳ ಯಾತ್ರೆ ವಿಚಾರವಾಗಿ ಬಿಜೆಪಿ ಅವರು ಮೊದಲೇ ಏಕೆ ಧರ್ಮಸ್ಥಳ ಯಾತ್ರೆ ಮಾಡಲಿಲ್ಲ? ವೀರೇಂದ್ರ ಹೆಗಡೆಯವರೇ ಎಸ್‌ಐಟಿ ತನಿಖೆಯನ್ನು ಸ್ವಾಗತ ಮಾಡಿದ್ದಾರೆ. ಸತ್ಯ ಹೊರಗೆ ಬರಬೇಕು ಅಂತ ವೀರೇಂದ್ರ ಹೆಗ್ಗಡೆ ಅವರೇ ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಇಷ್ಟೆಲ್ಲ ಮಾಡಬೇಕಾದರೆ ದುಡ್ಡು ಎಲ್ಲಿಂದ ಬಂದಿದೆ? ಹೋರಾಟ ಮಾಡಲು ಬಿಜೆಪಿ ಅವರಿಗೆ ಹೊರದೇಶದಿಂದ ದುಡ್ಡು ಬಂದಿದೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು.

ಸೌಜನ್ಯ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವ ವಿಚಾರವಾಗಿ ಸಿಬಿಐ ಯಾರ ಕೈ ಕೆಳಗೆ ಇದೆ? ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಸೌಜನ್ಯ ಕುಟುಂಬಕ್ಕೆ ಬಿಟ್ಟಿದ್ದು. ಒಂದು ಕಡೆ ಬಿಜೆಪಿಯವರು ವೀರೇಂದ್ರ ಹೆಗ್ಗಡೆಗೆ ಜೈಕಾರ ಅಂತಾರೆ.

ಮತ್ತೊಂದು ಕಡೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ವಿಪಕ್ಷದವರು ಹೇಳುವ ವಿಚಾರ ಎಲ್ಲವೂ ಸತ್ಯನ ಅಸೆಂಬ್ಲಿಯಲ್ಲಿ ಆರ್ ಅಶೋಕ್, ಸುನಿಲ್ ಕುಮಾರ್ ಇಬ್ಬರು ಚರ್ಚೆ ಮಾಡಿದರು.

ಸೌಜನ್ಯ ಪ್ರಕರಣದ ಬಗ್ಗೆ ಮಹಿಳೆಯರು ಹೇಳಿಕೆ ವಿಚಾರವಾಗಿ ಆ ಮಹಿಳೆ ಕೋರ್ಟ್ ಹಾಗೂ ಸಿಬಿಐ ಮುಂದೆ ಏಕೆ ಹೇಳಲಿಲ್ಲ? ಸಾಕ್ಷಿ ಗೊತ್ತಿದ್ದು ಮುಚ್ಚಿಡುವುದು ಅಪರಾಧ ಈ ವಿಚಾರ ಗೊತ್ತಿಲ್ಲ. ಅದು ಸೌಜನ್ಯ ಕುಟುಂಬಕ್ಕೆ ಬಿಟ್ಟ ವಿಚಾರ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಬಿಜೆಪಿ ನಾಯಕರಿಂದ ಚಾಮುಂಡಿ ಬೆಟ್ಟ ಚಲೋ ವಿಚಾರವಾಗಿ ಮಾತನಾಡಿದ ಅವರು ಮಾಡಲಿ ಬಿಡಿ ನಾನು ಏನು ಬೇಡ ಎನ್ನಲ್ಲ ಮಿರ್ಜಾ ಇಸ್ಮಾಯಿಲ್ ಮಹಾರಾಜರ ಜೊತೆ ಅಂಬಾರಿ ಮೇಲೆ ಹೋಗಿದ್ದರು.

ಆಗ ಬಿಜೆಪಿಯವರು ಎಲ್ಲಿಗೆ ಹೋಗಿದ್ದರು? ಈ ಹಿಂದೆ ನಿಸಾರ್ ಅಹಮದ್ ಉದ್ಘಾಟನೆ ಮಾಡಿದ್ದರು ಆಗ ಬಿಜೆಪಿಯವರು ಎಲ್ಲಿ ಹೋಗಿದ್ದರು? ಬಾನು ಮುಷ್ತಾಕ್ ಕನ್ನಡದ ಸಾಹಿತಿ.

ಅರಿಶಿಣ ಕುಂಕುಮ ಬಗ್ಗೆ ಮಾತನಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಕನ್ನಡದ ಮೇಲೆ ಪ್ರೀತಿ ಆಸಕ್ತಿ ಇಲ್ಲದೆ ಬರೆಯಲು ಸಾಧ್ಯನಾ? ಬೇರೆ ಧರ್ಮದವರು ಅರಿಶಿಣ ಕುಂಕುಮ ಹಾಕಿಕೊಳ್ಳಿ ಅಂದರೆ ಹೇಗೆ? ಅರಿಶಿನ ಕುಂಕುಮ ಹಚ್ಚಿಕೊಳ್ಳುವುದು ಅವರ ಧರ್ಮದಲ್ಲಿ ಇದೆಯ? ನೀವು ಹಿಂದೂಗಳಾಗಿ ಅಂದರೆ ಹೇಗೆ ಬಾನು ಮುಷ್ತಾಕ್ ವಿರುದ್ಧ ಯಾವುದೇ ಫತ್ವ ಹೊರಡಿಸಿಲ್ಲ ಈ ಬಗ್ಗೆ ಧರ್ಮ ಗುರುಗಳೆ ಸ್ಪಷ್ಟನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಭವ ಆಟ ಶ್ಲಾಘಿಸಿದ ನಾಯಕ ಶ್ರೇಯಸ್ ಅಯ್ಯರ ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆ