ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಅಭೂತಪೂರ್ವ ಮೈಲಿಗಲ್ಲು ನೆಟ್ಟಿದ್ದಾರೆ.
ಮುಖ್ಯಮಂತ್ರಿ ಹುದ್ದೆಯಲ್ಲಿ ಸುದೀರ್ಘ 8 ವರ್ಷಗಳ ಆಡಳಿತ ಅವಧಿಯನ್ನು ಪೂರ್ಣಗೊಳಿಸಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದು ಮೇ 20ಕ್ಕೆ ಮೂರು ವರ್ಷಗಳನ್ನು ಪೂರ್ಣಗೊಳಿಸಲಿದೆ.
ಇದಕ್ಕೂ ನಾಲ್ಕು ದಿನಗಳ ಮೊದಲೇ, ಅಂದರೆ ಭಾನುವಾರದ ವೇಳೆಗೆ ಸಿದ್ದರಾಮಯ್ಯ ಅವರು ತಮ್ಮ ಒಟ್ಟಾರೆ ಆಡಳಿತಾವಧಿಯಲ್ಲಿ ಭರ್ತಿ 8 ವರ್ಷಗಳನ್ನು ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ದಾಖಲೆಯ ಹಾದಿ ಹೀಗಿದೆ:
ಮೊದಲನೇ ಅವಧಿ: 5 ವರ್ಷ 4 ದಿನಗಳು
ಎರಡನೇ ಅವಧಿ (ಪ್ರಸ್ತುತ): 2 ವರ್ಷ 361 ದಿನಗಳು
ಒಟ್ಟು ಆಡಳಿತಾವಧಿ: ಭಾನುವಾರಕ್ಕೆ ಭರ್ತಿ 8 ವರ್ಷಗಳು ಪೂರ್ಣ

