LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಸಿದ್ದರಾಮಯ್ಯ ಭೇಟಿಯಾದ ರಮೇಶ್ ಜಾರಕಿಹೊಳಿ : ಕುತೂಹಲ ಮೂಡಿಸಿದ ಮಾತುಕತೆ

Advertisement

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಕಳೆದ 24 ಗಂಟೆಗಳಿಂದ ಸಾಲು ಸಾಲಾಗಿ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದು, ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಬುಧವಾರ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.

ಬೆನ್ನಲ್ಲೇ ಗುರುವಾರ ಮಾಜಿ ಸಚಿವರು ಹಾಗೂ ಶಾಸಕರಾದ ರಮೇಶ್ ಜಾರಕಿಹೊಳಿ, ಬಿಜೆಪಿ ಮಾಜಿ ಶಾಸಕ ನರಸಿಂಹ ನಾಯಕ್‌ (ರಾಜುಗೌಡ) ಭೇಟಿ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ಒಂದು ತಾಸಿಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರೊಂದಿಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ತಾವು ಸಕ್ರಿಯ ರಾಜಕಾರಣದಲ್ಲೇ ಮುಂದುವರೆಯಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾತುಕತೆ ಬಗ್ಗೆ ಕುತೂಹಲ

ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು ಹಾಗೂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರಿ ಸಚಿವರಾಗಿದ್ದರು.

ಸದ್ಯ ಬಿಜೆಪಿಯಲ್ಲಿದ್ದರೂ ಪಕ್ಷದ ರಾಜ್ಯ ನಾಯಕತ್ವದ ಜತೆ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದರ ನಡುವೆಯೇ ಸಿದ್ದರಾಮಯ್ಯ ಭೇಟಿ ಹಾಗೂ ಸುದೀರ್ಘ ಮಾತುಕತೆ ಕುತೂಹಲ ಮೂಡಿಸಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತರಬೇತಿಯಲ್ಲಿದ್ದ ವಿಮಾನ ಪತನ : ಕನ್ನಡಿಗ ಸೇರಿ ಇಬ್ಬರು ಪೈಲಟ್‌ಗಳು ಸಾವು ಧಾರವಾಡದಲ್ಲಿ ಪತ್ನಿಗೆ ಚಾಕು ಇರಿದು ಕೊಂದು ಪತಿ ನೇಣಿಗೆ ಶರಣುಸಿದ್ದರಾಮಯ್ಯ ಭೇಟಿಯಾದ ರಮೇಶ್ ಜಾರಕಿಹೊಳಿ : ಕುತೂಹಲ ಮೂಡಿಸಿದ ಮಾತುಕತೆಮಹಿಳಾ ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ 5 ನೇ ಸ್ಥಾನ ಲಾಡ್ಸ್ ಟೆಸ್ಟ್ : ಇಂಗ್ಲೆಂಡ್ ವಿರುದ್ಧ ಪಾಕ್ ಉತ್ತಮ ಆರಂಭಬಾಕ್ಸ್ ಆಫೀಸ್‌ನಲ್ಲಿ ಟಾಕ್ಸಿಕ್ ಸುನಾಮಿ : ಮೊದಲ ದಿನದ ಕಲೆಕ್ಷನ್ ಬಗ್ಗೆ​​​ ಅಧಿಕೃತ ಘೋಷಣೆ ಸಾಕ್ಷಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರು :  3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್7.5% ಮೀಸಲಾತಿಯನ್ನು 9ನೇ ಅನುಸೂಚಿಗೆ ಸೇರಿಸಲು ಒಗ್ಗಟ್ಟಿನ ಹೋರಾಟ ಅಗತ್ಯ: ಶರಣಬಸವ ನಾಯಕ ಜಾನೇಕಲ್ಆಡಳಿತ ವ್ಯವಸ್ಥೆ ಪರಿಚಯ ಕಾರ್ಯಕ್ರಮದಡಿಯಲ್ಲಿ  ಕಂದಾಯ ಇಲಾಖೆಗೆ ಭೇಟಿ ನೀಡಿದ ವಿದ್ಯಾರ್ಥಿಗಳುಕಳ್ಳರ ಕೈಚಳಕ: ದೇವರಿಗೇ ಕನ್ನ ಹಾಕಿದ ಕದೀಮರು