Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ ನನ್ನ ಹೆಂಡತಿಯ ಮದುವೆಯನ್ನು ತಪ್ಪಿಸಿ : ಬೆಳಗಾವಿಯಲ್ಲಿ ಪತಿಯ ಗೋಳಾಟ 

Advertisement

ಬೆಳಗಾವಿ: ಪರಸ್ಪರ ಒಪ್ಪಿಗೆಯಿಂದ ಮದುವೆಯಾದ (Marriage) ಪತ್ನಿಯನ್ನು ಆಕೆಯ ಮನೆಯವರೇ ಕೂಡಿಹಾಕಿ, ಇದೀಗ ಮತ್ತೊಬ್ಬರ ಜೊತೆ ಮದುವೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಬೆಳಗಾವಿ (Belagavi) ಜಿಲ್ಲೆಯ ಹಿರೆಬಾಗೇವಾಡಿಯಲ್ಲಿ ವೆಂಕಟೇಶ್ವರ ರಾಠೋಡ್ (Venkateshwara Rathod) ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

ಇದು 2016 ಲವ್‌ ಸ್ಟೋರಿ

ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್ವರ ರಾಠೋಡ್, "ನನಗೆ ಮಂಜುಳಾ ಹಂಚಿನಮನಿ ಎಂಬಾಕೆಯ ಪರಿಚಯ 2016ರಿಂದಲೇ ಇತ್ತು. ಆಕೆಯನ್ನು ನಾನು 2022ರಲ್ಲಿ ಮದುವೆಯಾಗಿದ್ದೇನೆ.

ಆದರೆ ಈಗ ಆಕೆಯ ತಂದೆ ಹಿರೆಬಾಗೇವಾಡಿಯ ರುದ್ರಪ್ಪ ಹಂಚಿನಮನಿ ಹಾಗೂ ಸಹೋದರ ಪ್ರದೀಪ್ ಹಂಚಿನಮನಿ ಅವರು ಮಂಜುಳಾರನ್ನು ಮನೆಯಲ್ಲೇ ಕೂಡಿಹಾಕಿದ್ದಾರೆ" ಎಂದು ದೂರಿದ್ದಾರೆ. ಅಲ್ಲದೆ, ಪತ್ನಿಯ ಮನೆಯವರಿಗೆ ಮನೆ ಕಟ್ಟಲು ಲಕ್ಷಾಂತರ ರೂಪಾಯಿ ಹಣವನ್ನೂ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಜೈಲಿಗೂ ಕಳುಹಿಸಿದ್ದರು ಎಂದು ಪತಿಯ ಆಕ್ರೋಶ

ಪತ್ನಿಯ ಮನೆಯವರು ನನ್ನ ವಿರುದ್ಧ ಇಲ್ಲಸಲ್ಲದ ದೂರುಗಳನ್ನು ನೀಡಿ, ಸುಳ್ಳು ಕೇಸ್ ದಾಖಲಿಸಿ ನನ್ನನ್ನು ಜೈಲಿಗೂ ಕಳುಹಿಸುವಂತೆ ಷಡ್ಯಂತ್ರ ರೂಪಿಸಿದ್ದರು ಎಂದು ರಾಠೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 "ನನ್ನ ಮೇಲೆ ಹಲ್ಲೆ ನಡೆಸಿ ಬಂಗಾರ ಮತ್ತು ಹಣವನ್ನು ಸುಲಿಗೆ ಮಾಡಲಾಗಿದೆ. ನನ್ನ ಪತ್ನಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬರಿಗೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ಇದನ್ನು ಕೂಡಲೇ ನಿಲ್ಲಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ

ಈ ಹಲ್ಲೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್ವರ ರಾಠೋಡ್ ಈಗಾಗಲೇ ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮದುವೆಯಾದ ದಾಖಲೆಗಳಿದ್ದರೂ ಪತ್ನಿಯ ಮನೆಯವರು ಅಕ್ರಮವಾಗಿ ಆಕೆಯನ್ನು ಬಂಧಿಸಿಟ್ಟಿರುವುದು ಈಗ ಕಾನೂನು ಸಮರಕ್ಕೆ ಕಾರಣವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಪತ್ನಿಯನ್ನು ತಮಗೆ ಒಪ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

 

 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀಲಂಕಾದಿಂದ ಬರೋಬ್ಬರಿ 10 ಗಂಟೆ 45 ನಿಮಿಷ ಈಜಿ ದಡ ತಲುಪಿದ ದಂಪತಿ ಸರ್ ನನ್ನ ಹೆಂಡತಿಯ ಮದುವೆಯನ್ನು ತಪ್ಪಿಸಿ : ಬೆಳಗಾವಿಯಲ್ಲಿ ಪತಿಯ ಗೋಳಾಟ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರತಿ ಪ್ರಶ್ನೆ ಪತ್ರಿಕೆ ಲಕ್ಷಕ್ಕೆ ಮಾರಾಟ : ಮಾಸ್ಟರ್ ಮೈಂಡ್ ಅರೆಸ್ಟ್ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ: ತನಿಖೆ ಕೈಗೆತ್ತಿಕೊಂಡ CBIಮೇ 16 ರಂದು ಅತ್ತಿಕುಳ್ಳೆಪಾಳ್ಯದಲ್ಲಿ ಶ್ರೀ ಶನೇಶ್ಚರ ಜಯಂತಿ : ಅಮಾನಿಕೆರೆ ಮಂಜುನಾಥ್ವಿಜಯನಗರ ಜಿಲ್ಲೆ ಲೇಡಿ ಸಿಂಗಂನಿಂದ ಮನೆಗಳ್ಳರ ಭರ್ಜರಿಭೇಟಿಮೇ. 3ರಂದು ನಡೆಯಬೇಕಿದ್ದ ನೀಟ್ ಪರೀಕ್ಷೆ ರದ್ದು : ಸಿಬಿಐ ತನಿಖೆಗೆ ಆದೇಶ ಸತತ 2ನೇ ಬಾರಿಗೆ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಹಿಮಂತಶರ್ಮಾ ಅಧಿಕಾರ ಸ್ವೀಕಾರ ಖಜ್ಜಿಡೋಣೆಯಲ್ಲಿ ಡಿ ಕೆ ಡಿ ಡ್ಯಾನ್ಸ್ ಸ್ಪರ್ಧೆಗೆ ವಿಧಾನ ಪರಿಷತ ಸದಸ್ಯ  ಪಿ. ಎಚ್. ಪೂಜಾರ ಚಾಲನೆ ಮದರ್ಸ್ ಡೇ ದಿನವೆ ಹೆತ್ತಮ್ಮನನ್ನು ಗುಂಡಿಕ್ಕಿ ಕೊಂದ ಮಗ.