LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಬನ್ನಿ ಉತ್ಸವದಲ್ಲಿ ಕೋಲುಗಳ ಕಾಳಗ: ಓರ್ವ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ 

Advertisement

ಕರ್ನೂಲು : ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಬೆಟ್ಟದ ಮೇಲೆ ದಸರಾ ಮರುದಿನ ನಡೆಯುವ ಸಾಂಪ್ರದಾಯಿಕ ಬನ್ನಿ ಉತ್ಸವದಲ್ಲಿ (Banni Festival) ಆಘಾತಕಾರಿ (Shocking) ದುರಂತ ಸಂಭವಿಸಿದೆ.

ಶತಮಾನಗಳಿಂದ ನಡೆದುಕೊಂಡು ಬಂದಿರುವ ಆಚಾರದ ಹೆಸರಿನಲ್ಲಿ ನಡೆದ ಈ ದೊಣ್ಣೆಗಳ ಕಾಳಗದಲ್ಲಿ (ಕರ್ರಲ ಸಮರ) ತಲೆಗಳು ಒಡೆದು, ರಕ್ತ ಸುರಿದರೂ ಭಕ್ತರು ಕಿಂಚಿತ್ತೂ ಹಿಂದೆ ಸರಿಯಲಿಲ್ಲ. ಮಾಳ ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವದ ನಂತರ ಉತ್ಸವ ಮೂರ್ತಿಗಳನ್ನು ಬೆಟ್ಟದ ಮೇಲಿಂದ ಕೆಳಗಿರುವ ಸಿಂಹಾಸನ ಕಟ್ಟೆಗೆ ತರಲಾಯಿತು.

ಅಲ್ಲಿ ವಿಶೇಷ ಪೂಜೆಗಳು ಮುಗಿಯುತ್ತಿದ್ದಂತೆ, ವಿಗ್ರಹಗಳನ್ನು ವಶಪಡಿಸಿಕೊಳ್ಳಲು ಸುತ್ತಮುತ್ತಲಿನ 11 ಹಳ್ಳಿಗಳ ಜನರು ದೊಣ್ಣೆಗಳು ಮತ್ತು ಪಂಜುಗಳನ್ನು ಹಿಡಿದು ಭೀಕರವಾಗಿ ಮುಗಿಬಿದ್ದರು.

ಅರ್ಧರಾತ್ರಿಯ ಬಳಿಕ ಭುಗಿಲೆದ್ದ ಹಿಂಸಾಚಾರ

ಅರ್ಧರಾತ್ರಿ ದಾಟಿದ ನಂತರ ಉತ್ಸವ ಮೂರ್ತಿಗಳ ಮೆರವಣಿಗೆ ಆರಂಭವಾಗುತ್ತಿದ್ದಂತೆ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿತು. ಪರಸ್ಪರ ಬಡಿದಾಡಿಕೊಂಡ ಪರಿಣಾಮ ಆಲೂರು ಮೂಲದ ಪೋತುರಾಜು ಎಂಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಾಳುಗಳನ್ನು ತಕ್ಷಣವೇ ಆಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಐತಿಹಾಸಿಕ ಉತ್ಸವವನ್ನು ಕಣ್ತುಂಬಿಕೊಳ್ಳಲು ಆಂಧ್ರಪ್ರದೇಶ ಮಾತ್ರವಲ್ಲದೆ ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದಲೂ ಲಕ್ಷಾಂತರ ಭಕ್ತರು ದೇವರಗಟ್ಟು ಬೆಟ್ಟಕ್ಕೆ ಧಾವಿಸಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಣದ ವಿಚಾರಕ್ಕೆ ಗೆಳೆಯನನ್ನೇ ಕೊಂದ ದುಷ್ಟ : ಬಳಿಕ ಆತನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಕಿರಾತಕಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದ ದ. ಆಪ್ರಿಕಾ ಬನ್ನಿ ಉತ್ಸವದಲ್ಲಿ ಕೋಲುಗಳ ಕಾಳಗ: ಓರ್ವ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ ಬೌಲಿಂಗ್ ಸ್ನೇಹಿ ಪಿಚ್ ನಲ್ಲಿ ಗೆಲ್ಲುವುದೇ ಭಾರತ ತಂಡ ಭಾರತ- ಜಿಂಬಾಬೆ ಮಹಿಳಾ ತಂಡಗಳ ಮೊದಲ ಏಕದಿನ ಪಂದ್ಯ ನಾಳೆ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಚಾಲಕ: ಇಬ್ಬರ ಸ್ಥಿತಿ ಗಂಭೀರ ಪಾನಿ ಪುರಿ ತಿಂದು ಅನಾಹುತ : ಒಂದೇ ಕುಟುಂಬದ 7 ಮಂದಿ ಸಾವು ಬದುಕಿನ ಹೋರಾಟಪೊಲೀಸ್ ಸಿಬ್ಬಂದಿಗೆ ಶೀಘ್ರದಲ್ಲೇ ನೂತನ ವಿಸಿಲ್ ಗಾರ್ಡ್: ಡಿಕೆ ಶಿವಕುಮಾರ್ ಘೋಷಣೆ ಹಬ್ಬದ ದಿನವೇ ಬೆಳಗಾವಿಯಲ್ಲಿ ಪತ್ನಿಯ ಶೀಲ ಶಂಕಿಸಿ ಪ್ರಾಣ ತೆಗೆದ ಕುಡುಕ ಗಂಡಚಿಕ್ಕೋಡಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ