Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲು ತೂರಾಟ : ಮೂವರು ಅರೆಸ್ಟ್ 

Advertisement

ಬೆಂಗಳೂರು: ದಾವಣಗೆರೆಯ ರೈಲ್ವೆ ರಕ್ಷಣಾ ಪಡೆ 28.05.2026 ರಂದು ಬ್ಯಾಡಗಿ ಮತ್ತು ಹಾವೇರಿ ರೈಲು ನಿಲ್ದಾಣಗಳ ಮಧ್ಯೆ ಸಂಭವಿಸಿದ ರೈಲುಗಳ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.

30.05.2026 ರಂದು, ರೈಲು ಸಂಖ್ಯೆ. 26752 ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಿಸಿಟಿವಿ ದೃಶ್ಯಗಳಿಂದ ಲಭಿಸಿದ ಮಹತ್ವದ ಮಾಹಿತಿಯ ಆಧಾರದ ಮೇಲೆ, ಶ್ರೀ ಆರ್.ಕೆ.ಭರದ್ವಾಜ್, ಪಿಸಿ/ದಾವಣಗೆರೆ ಅವರ ಮೇಲ್ವಿಚಾರಣೆಯಲ್ಲಿ ಹಾಗೂ ಶ್ರೀ ಎನ್.ಜಿ. ನಾಯಕ್, ಎಎಸ್‌ಐ/ಹರಿಹರ ಮತ್ತು ಸಿಬ್ಬಂದಿಯೊಂದಿಗೆ ವಿಶೇಷ ನಿಗಾವಹಿಸುವ ಕಾರ್ಯಾಚರಣೆ ನಡೆಸಲಾಯಿತು.

ಈ ಕಾರ್ಯಾಚರಣೆಯ ವೇಳೆ, ಸುಮಾರು 17:05 ಗಂಟೆಗೆ, ಬ್ಯಾಡಗಿ-ಹಾವೇರಿ ರೈಲು ನಿಲ್ದಾಣಗಳ ನಡುವೆ ಕಿಮೀ ಸಂಖ್ಯೆ 381/500 ಸಮೀಪದಲ್ಲಿ ಸಿಸಿಟಿವಿಯಲ್ಲಿ ಕಾಣಿಸಿಕೊಂಡ ವ್ಯಕ್ತಿಗಳ ಲಕ್ಷಣಗಳಿಗೆ ಹೊಂದುವ ಮೂರು ಬಾಲಕರನ್ನು ಗುರುತಿಸಲಾಯಿತು. 

ಸ್ಥಳದಲ್ಲಿಯೇ ವಿಚಾರಣೆ ನಡೆಸಿದಾಗ, ಅವರು 28.05.2026 ರಂದು ದಿನದ ಸಮಯದಲ್ಲೂ ಮತ್ತು ಸಂಜೆ ಸಮಯದಲ್ಲೂ ರೈಲು ಸಂಖ್ಯೆ. 20675 ಮತ್ತು 26752 ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ಒಪ್ಪಿಕೊಂಡರು.

ಈ ಬಾಲಕರನ್ನು ಹೆಚ್ಚಿನ ವಿಚಾರಣೆಗಾಗಿ ಹರಿಹರ ಆರ್ ಪಿಎಪ್ ಔಟ್‌ಪೋಸ್ಟ್‌ಗೆ ಕರೆತರಲಾಯಿತು ಹಾಗೂ ನಂತರ ಕಾನೂನು ಕ್ರಮಗಳಿಗಾಗಿ ದಾವಣಗೆರೆ ಆರ್ ಪಿಎಪ್ ಪೋಸ್ಟ್‌ಗೆ ಒಪ್ಪಿಸಲಾಯಿತು. 

ನಂತರ, ಬಿಎನ್‌ಎಸ್‌ಎಸ್ ಕಾಯ್ದೆಯ ಅಡಿಯಲ್ಲಿ ನೋಟಿಸ್ ನೀಡಿ, ಅಗತ್ಯವಿದ್ದಾಗ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚನೆ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ.

ಈ ವಿಷಯವನ್ನು ಸಂಬಂಧಿತ ತನಿಖಾ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗುವಂತಹ ಈ ರೀತಿಯ ಕೃತ್ಯಗಳ ಗಂಭೀರತೆ ಹಾಗೂ ಕಾನೂನು ಪರಿಣಾಮಗಳ ಬಗ್ಗೆ ಸಾರ್ವಜನಿಕರು, ವಿಶೇಷವಾಗಿ ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳಿಗೆ ಜಾಗೃತಿ ಮೂಡಿಸಬೇಕೆಂದು ರೈಲ್ವೆ ರಕ್ಷಣಾ ಪಡೆಯಿಂದ ಮನವಿ ಮಾಡಲಾಗಿದೆ.

 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲು ತೂರಾಟ : ಮೂವರು ಅರೆಸ್ಟ್ ಫೇಸ್ ಬುಕ್ ಖಾತೆಯಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ದ ಅವಹೇಳನಕಾರಿ ಪೋಸ್ಟ್ : ದೂರು ದಾಖಲು ಸಂಗೊಳ್ಳಿ ರಾಯಣ್ಣನ ರೀತಿಯೇ ಸಿದ್ದರಾಮಯ್ಯರಿಗೂ ಅವರ ಜತೆಯಿದ್ದವರೇ ಚೂರಿ ಹಾಕಿದ್ರು : ಯತ್ನಾಳ್ಡಿ.ಕೆ.ಶಿವಕುಮಾರ್ ಸಿಎಂಯಾಗಿದ್ದಕ್ಕೆ  ಬಿ.ವಿ.ವಿಜಯೇಂದ್ರಗೆ ಫುಲ್ ಖುಷಿಯಾಗಿದೆ : ಶಾಸಕ ಯತ್ನಾಳ್ ಒಂದು ತಿಂಗಳ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ : ಮಲ್ಲಿಕಾರ್ಜುನ ಖರ್ಗೆಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಅಥವಾ ಗೋ ಹತ್ಯೆ ಪ್ರಸ್ತಾವನೆ ಮುಂದಿಲ್ಲ : ಕೇಂದ್ರ ಸ್ಪಷ್ಟನೆ ಕಳ್ಳನನ್ನು ನೋಡಿದ ಮಹಿಳೆ ಮೇಲೆ ಫೈರಿಂಗ್ ಮಾಡಿದ ಕಿರಾತಕ : ಗ್ರಾಮಸ್ಥರಿಂದ ಥಳಿತ ಡೆತ್ ನೋಟ್ ಬರೆದಿಟ್ಟು ಉಪತಹಶೀಲ್ದಾರ್ ಆತ್ಮಹತ್ಯೆ ಜೂನ್ ೩ ರಂದು ರಾಜ್ಯದ ೨೫ ನೇ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನಕ್ರಿಕೆಟ್: ಪಾಕಿಸ್ತಾನ್ ತಂಡಕ್ಕೆ ೫ ವಿಕೆಟ್‌ಗಳ ಜಯ