LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ತಾಪಂ, ಜಿಪಂ ಮೀಸಲಾತಿ ಪಟ್ಟಿ ಪ್ರಕಟಿಸಿದ ಸರ್ಕಾರ

Advertisement

ತುರುವೇಕೆರೆ : ತಾಲ್ಲೂಕಿನ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿಯ ಕ್ಷೇತ್ರವಾರು ಮೀಸಲಾತಿ ಪಟ್ಟಿಯನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಮೀಸಲಾತಿ ಪಟ್ಟಿಯು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದಿದ್ದ ಆಕಾಂಕ್ಷಿಗಳಲ್ಲಿ ಕೆಲವರಿಗೆ ಸಿಹಿ ತಿನಿಸಿದ್ದರೆ, ಮತ್ತೂ ಕೆಲವರಿಗೆ ಬೇವಿನ ರುಚಿಯನ್ನು ಉಣಬಡಿಸಿದೆ. 

ತುರುವೇಕೆರೆ ತಾಲ್ಲೂಕು ವ್ಯಾಪ್ತಿಯು 4 ಜಿಲ್ಲಾ ಪಂಚಾಯ್ತಿ ಹಾಗೂ 16 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ಒಳಗೊಂಡಿದೆ.

 ಸರ್ಕಾರದ ಮೀಸಲಾತಿಯು ಈ ಬಾರಿ 50:50 ಅನುಪಾತದಲ್ಲಿದೆ. ಈ ಪ್ರಕಾರ ಶೇ.50 ರಷ್ಟು ಸ್ಥಾನ ಮಹಿಳೆಯರಿಗೆ, ಶೇ.50ರಷ್ಟು ಸ್ಥಾನ ಪುರುಷರಿಗೆ ಮೀಸಲಾಗಿದೆ. 
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಾದ ಬಾಣಸಂದ್ರ (ಅನುಸೂಚಿತ ಜಾತಿ), ದಬ್ಬೇಘಟ್ಟ (ಸಾಮಾನ್ಯ), ದಂಡಿನಶಿವರ (ಸಾಮಾನ್ಯ ಮಹಿಳೆ), ಮಾಯಸಂದ್ರ (ಹಿಂದುಳಿದ ವರ್ಗ ಅ ಮಹಿಳೆ}ಗೆ ಮೀಸಲಾಗಿದೆ. ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಾದ ಅಮ್ಮಸಂದ್ರ ರೂರಲ್ (ಸಾಮಾನ್ಯ), ಸಂಪಿಗೆ (ಅನುಸೂಚಿತ ಪಂಗಡ ಮಹಿಳೆ), ದಂಡಿನಶಿವರ (ಅನುಸೂಚಿತ ಜಾತಿ), ಬಾಣಸಂದ್ರ(ಅನುಸೂಚಿತ ಜಾತಿ ಮಹಿಳೆ), ಮಲ್ಲಾಘಟ್ಟ ಅಮಾನಿಕೆರೆ (ಸಾಮಾನ್ಯ), ಮುನಿಯೂರು (ಹಿಂದುಳಿದ ವರ್ಗ ಅ), ಕೊಂಡಜ್ಜಿ (ಹಿಂದುಳಿದ ವರ್ಗ ಅ), ವಡವನಘಟ್ಟ (ಹಿಂದುಳಿದ ವರ್ಗ ಬ ಮಹಿಳೆ), ಮಾಯಸಂದ್ರ (ಹಿಂದುಳಿದ ವರ್ಗ ಅ ಮಹಿಳೆ), ಮಾವಿನಕೆರೆ (ಹಿಂದುಳಿದ ವರ್ಗ ಅ), ಗೋಣಿತುಮಕೂರು (ಸಾಮಾನ್ಯ), ಕೊಡಗೀಹಳ್ಳಿ (ಸಾಮಾನ್ಯ ಮಹಿಳೆ), ಕಣತೂರು (ಸಾಮಾನ್ಯ ಮಹಿಳೆ), ದಬ್ಬೇಘಟ್ಟ (ಸಾಮಾನ್ಯ ಮಹಿಳೆ), ಮಣಿಚೆಂಡೂರು (ಸಾಮಾನ್ಯ), ಭೈತರಹೊಸಹಳ್ಳಿ (ಸಾಮಾನ್ಯ) ಕ್ಷೇತ್ರಕ್ಕೆ ಮೀಸಲಾಗಿದೆ. 

ಈ ಮೀಸಲಾತಿ ಪ್ರಕಟಣೆ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ 10 ದಿನಗಳ ಕಾಲಾವಕಾಶ ನೀಡಿದ್ದು, ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಸರ್ಕಾರದ ಮೀಸಲಾತಿ ಪಟ್ಟಿ ಬಗ್ಗೆ ಯಾರಾದರೂ ಆಕ್ಷೇಪಣೆ ಸಲ್ಲಿಸುವವರೇ ಕಾದುನೋಡಬೇಕಿದೆ.
ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕಾಗಿ ₹22,400 ಕೋಟಿ ಕೊಡಿ : ಕೇಂದ್ರಕ್ಕೆ ಮತ್ತೆ ಪತ್ರ ಬರೆದ ಜಿ. ಪರಮೇಶ್ವರ್ಮೈದಾನದಲ್ಲೇ ದುರಂತ: ಗೋಲ್‌ಕೀಪರ್ ಡಿಕ್ಕಿಯಾಗಿ ಆಟಗಾರ ಸಾವುಮಾನ್ವಿ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ದಾಖಲೆಮಾನ್ವಿ ಪಟ್ಟಣದ ಕುಡಿಯುವ ನೀರಿನ ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್. ಬೋಸರಾಜುಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ ಆರ್ಯವೈಶ್ಯ ಸಂಘದಿಂದ 2 ಲಕ್ಷ ಸಹಾಯಧನಗೋಕಾಕನಲ್ಲಿ ಮಹಿಳೆ ಕೊಲೆ ಆರೋಪ: ಪ್ರಿಯಕರನ ವಿರುದ್ಧ ಎಫ್‌ಐಆರ್ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಮಾಡೆಲ್ ಆಗಲಿದೆ:  ಕೆ.ಎನ್.ರಾಜಣ್ಣ ಕೆ. ವಿ. ಅನಿಸ್ ಅಮೋಘ ಶತಕ : ಇನ್ನಿಂಗ್ಸ್ ಗೆಲುವಿನತ್ತ ಕರ್ನಾಟಕ ಚಿತ್ತ ವೈಭವ್ ಸೂರ್ಯವಂಸಿ, ರಜತ ಪಟಿದಾರ್ ಗೆ ಸ್ಥಾನ ರಿಂಗ್ ರೋಡ್ ಬೇಡ, ಪಾಣಂದ್ ರಸ್ತೆಗಳನ್ನು ದುರಸ್ತಿ ಮಾಡಿ - ಸದಲಗಾ ಭಾಗದ ರೈತರ ಏಕಮುಖ ಬೇಡಿಕೆ