ನ್ಯೂ ಚಂದಿಗಢ: ಕೆ.ಎಲ್. ರಾಹುಲ್ ಹಾಗೂ ನಾಯಕ ಶುಭಮಾನ್ ಗಿಲ್ ಅವರ ಆಕರ್ಷಕ ಶತಕಗಳ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂದಿಲ್ಲಿ ಅಪಘಾನಿಸ್ತಾನ್ ವಿರುದ್ಧ ಆರಂಭವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.
ಇಲ್ಲಿನ ಮಹಾರಾಜ ಯಧುವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಮೊದಲ ದಿನದಾಟ ಮುಗಿದಾಗ ಭಾರತ ತಂಡವು ೩ ವಿಕೆಟ್‌ಗೆ ೩೬೮ ರನ್‌ಗಳಿಸಿತ್ತು.
ನಾಯಕ ಶುಭಮಾನ್ ಗಿಲ್ ೧೪೩ ಎಸೆತಗಳಲ್ಲಿ ೧೧ ಬೌಂಡರಿ, ೧ ಸಿಕ್ಸರ್ ನೆರವಿನಿಂದ ೧೦೩ ರನ್‌ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ರಿಷಬ್ ಪಂತ್ ೭೦ ಎಸೆತಗಳಲ್ಲಿ ೨ ಬೌಂಡರಿ, ೩ ಸಿಕ್ಸರ್ ನೆರವಿನಿಂದ ೫೦ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.
ಇದಕ್ಕೆ ಮುನ್ನ ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್. ರಾಹುಲ್ ಸರಿಯಾಗಿ ೧೦೦ (೧೬೫ ಎಸೆತ, ೧೧ ಬೌಂಡರಿ) ಉತ್ತಮ ಅಡಿಪಾಯ ಹಾಕಿದರು. ಇನ್ನು ಐಪಿಎಲ್ ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಮತ್ತೋರ್ವ ಆಟಗಾರ ಸಾಯಿ ಸುದರ್ಶನ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಆಡಿ ೮೧ ರನ್‌ಗಳಿಸಿದರು. ಅವರು ೧೦೪ ಎಸೆತಗಳನ್ನು ಎದುರಿಸಿ ೧೩ ಬೌಂಡರಿ ಬಾರಿಸಿದರು.

