ಹರಾರೆ(ಜಿAಬಾಬ್ವೆ): ಪ್ರವಾಸಿ ಭಾರತ ಹಾಗೂ ಜಿಂಬಾಬ್ವೆ ಕ್ರಿಕೆಟ್ ತಂಡಗಳ ನಡುವಿನ ಮೂರು ಪಂದ್ಯಗಳ ಟ್ವೆಂಟಿ-೨೦ ಸರಣಿಯ ಮೊದಲ ಪಂದ್ಯವು ಜುಲೈ ೨೩ ರಂದು ನಡೆಯಲಿದೆ.
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಅಂದು ಭಾರತೀಯ ಕಾಲಮಾನ ಮಧ್ಯಾಹ್ನ ೪:೩೦ ಕ್ಕೆ ಪಂದ್ಯ ಆರಂಭವಾಗಲಿದೆ. ಐರ್ಯಲೆಂಡ್ ಹಾಗೂ ಇಂಗ್ಲೆAಡ್ ವಿರುದ್ಧದ ಟ್ವೆಂಟಿ-೨೦ ಸರಣಿಗಳನ್ನು ಸೋತಿರುವ ಭಾರತ ತಂಡಕ್ಕೆ ಈ ಸರಣಿ ಜಯ ತೀರಾ ಅಗತ್ಯವಾಗಿದೆ.


