ಬೆಂಗಳೂರು : ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಅಮಾನವೀಯತೆಯಿಂದ ನಡೆದುಕೊಂಡಿದ್ದು, ಬಸ್ ಹತ್ತುಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದು ಕ್ರೌರ್ಯ ಮೇರೆದಿದ್ದಾರೆ.
ನೆಲಮಂಗಲ ಟೋಲ್ ಬಳಿ ಈ ಒಂದು ಹಲ್ಲೆ ನಡೆದಿದೆ. ಬೈಕ್ ಸವಾರನ ಮೊಬೈಲ್ನಲ್ಲಿ ಈ ಒಂದು ಹಲ್ಲೆಯ ದೃಶ್ಯ ಸೆರೆಯಾಗಿದೆ.
ಬೆಂಗಳೂರಿನ ನೆಲಮಂಗಲ ಟೋಲ್ ಬಳಿ ಈ ಒಂದು ಬಿಕ್ಷುಕನ ಮೇಲೆ ಬಸ್ ಸಿಬ್ಬಂದಿ ಕ್ರೌರ್ಯ ಮೆರೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವ್ಯಕ್ತಿ ಕೆಳಗೆ ಬಿದ್ದರೂ ಕೇರ್ ಮಾಡದೆ ಬಸ್ ಕಂಡಕ್ಟರ್ ತೆರಳಿದ್ದಾನೆ ಬಿಎಂಟಿಸಿ ಸಿಬ್ಬಂದಿ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗುತ್ತಿದೆ.


